ಹೆಜಮಾಡಿ: ಉಚಿತ ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆ

ಪಡುಬಿದ್ರಿ: ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ `ಜೀವರಕ್ಷಕ ಆ್ಯಂಬುಲೆನ್ಸ್'ನ ಉಚಿತ ಸೇವೆಯನ್ನು ಭಾನುವಾರ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಲೋರ್ಕಾಣೆಗೊಳಿಸಲಾಯಿತು.
ಮುಲ್ಕಿ ಚರ್ಚ್‍ನ ಧರ್ಮಗುರುಗಳಾದ ವಂ. ಸಿಲ್ವೆಸ್ಟರ್ ಡಿ`ಕೋಸ್ಟ ಅವರು ಪ್ರಾರ್ಥನಾವಿಧಿಯನ್ನು ನೆರವೇರಿಸಿ ಹರಸಿದರು. ಕೆನರಾ ಬ್ಯಾಂಕಿನ ಮಂಗಳೂರು ವಲಯ ಎಜಿಎಂ ಆ್ಯಂಟೊನಿ ಅವರು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು. ಪಡುಬಿದ್ರಿಯ ಕ್ರೈಂ ಎಸ್‍ಐ ಸುದರ್ಶನ್ ದೊಡ್ಡಮನಿ ಅವರು ವಾಹನಕ್ಕೆ ಚಾಲನೆ ನೀಡಿ, ಷಪ್ತ ಗೆಳೆಯರ ಬಳಗಕ್ಕೆ ವಾಹನ ಕೀಲಿಗೈ ಹಸ್ತಾಂತರಿಸಿದರು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುಂಶಿಕ ಅರ್ಚಕರಾದ ವೇದ ಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ, ವೇದ ಮೂರ್ತಿ ಹರಿನಾರಾಯಣದಾಸ ಆಸ್ರಣ್ಣ, ಹೆಜಮಾಡಿ ಜುಮಾ ಮಸೀದಿಯ ಧರ್ಮಗುರು ಹಾಜಿ ಅಶ್ರಫ್ ಸಖಾಫಿ, ಸೈಂಟ್ ಫಿಲೊಮಿನಾ ಕಾಲೇಜು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ವಂ. ಫ್ರಾನ್ಸಿಸ್ ಝ್ಸೇವಿಯರ್ ಗೋಮ್ಸ್, ಕಳವಾರು ಚರ್ಚ್ ಧರ್ಮಗುರುಗಳಾದ ವಂ. ಮಾರ್ಸೆಲ್ ಸಲ್ದಾನ, ವಾಲ್ಟರ್ ಡಿ`ಸೋಜ, ಕೆನರಾ ಬ್ಯಾಂಕ್ ಮುಲ್ಕಿಯ ವ್ಯವಸ್ಥಾಪಕ ಅತುಲ್, ಹಾಜಿ ಶೇಖಬ್ಬ ಕೋಟೆ, ನಾರಾಯಣ ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಹಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಮಂಡನ್, ಸದಾಶಿವ ಕೋಟ್ಯಾನ್ ಮತ್ತು ಹೆಜಮಾಡಿಯ ಆಪ್ತ ಗೆಳೆಯರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಿವಾಕರ್ ಹೆಜ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.
24 ಗಂಟಗಳು ಉಚಿತ ಸೇವೆ: ರೋಲ್ಫಿ ಡಿಕೋಸ್ತರವರ ಆಪ್ತ ಬಳಗದ ವತಿಯಿಂದ ರೂ.10 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ನೂತನ ಆ್ಯಂಬುಲೆನ್ಸ್ ಜೀವ ರಕ್ಷಕ ಹೆಸರಿನಲ್ಲಿ ಹೆಜಮಾಡಿ ಆಸುಪಾಸಿನಲ್ಲಿ ಉಚಿತವಾಗಿ ಸೇವೆ ನೀಡಲಿದೆ. 24 ಗಂಟೆಗಳಲ್ಲೂ ಹೆಜಮಾಡಿ ಹಾಗೂ ನಡ್ಸಾಲು ಗ್ರಾಮಗಳ ವ್ಯಾಪ್ತಿಯ ಬಡವರು, ಕಷ್ಟ, ಕಾರ್ಪಗಳಿಗೆ ಒಳಗಾದವರ ಅಪಘಾತ ಅಥವಾ ಅನಾರೋಗ್ಯದ ಸಂದರ್ಭಗಳಲ್ಲಿ 9494685454ಗೆ ಕರೆಯೊಂದನ್ನು ರವಾನಿಸಿದಲ್ಲಿ ಕೂಡಲೇ ತಮ್ಮ ಸಹಾಯಕ್ಕೆ ಈ ಆ್ಯಂಬುಲೆನ್ಸ್ ಸೇವೆಯು ಉಚಿತವಾಗಿ ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಜನತೆಗೆ ತುರ್ತು ಸಂದರ್ಭ ಗಳಲ್ಲಿ ಬೇಕಾಗುವ ಶೀಥಲೀಕರಣ ಪೆಟ್ಟಿಗೆಯನ್ನೂ ಒದಗಿಸುವ ಯೋಜನೆಯೂ ತಮ್ಮಲ್ಲಿರುವುದಾಗಿ ಬಳಗದ ರಾಲ್ಫಿ ಡಿಕೋಸ್ತ ತಿಳಿಸಿದ್ದಾರೆ.







