ಬಾಲಕಿ ನಾಪತ್ತೆ

ಮಂಗಳೂರು: ಕಾವೂರಿನ ಶಾಂತಿನಗರ ನಿವಾಸಿ, ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದ ದೇವಿಕಾ (16) ಎಂಬ ಬಾಲಕಿ ಜನವರಿ 16 ರಂದು ಬೆಳಗ್ಗೆ ಕಾಲೇಜಿಗೆ ತೆರಳಿದವಳು ಸಂಜೆ ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
5.3 ಅಡಿ ಎತ್ತರ, ಗೋಧಿ ಬಿಳಿ ಮೈಬಣ್ಣ, ಸಾಧಾರಣ ಶರೀರ, ಕನ್ನಡ ಮತ್ತು ತುಳು ಭಾಷೆ ಮಾತನಾಡಬಲ್ಲರು, ಬೂದು ಬಣ್ಣದ ಟಾಪ್ ಮತ್ತು ಬಿಳಿ ಪ್ಯಾಂಟ್ ಮತ್ತು ಬಿಳಿ ಶಾಲು ಧರಿಸಿರುತ್ತಾರೆ.
ಕಾಣೆಯಾದ ಬಾಲಕಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಾವೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824- 220533, ಪೊಲೀಸ್ ಕಂಟ್ರೋಲ್ ರೂಂ 0824-2220800, ಪೊ?ಲಿಸ್ ಉಪನಿರೀಕ್ಷಕರು ಕಾವೂರು ಪೊಲೀಸ್ ಠಾಣೆ 9480805358, ನಂಬರ್ ಗೆ ಸಂಪರ್ಕಿಸುವಂತೆ ಕಾವೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





