ಪಟಾಕಿ ಅಗ್ನಿ ಅನಾಹುತ ತಪ್ಪಿಸಲು ಸಮಿತಿ ರಚನೆ

File Photo
ಮಂಗಳೂರು: ಸುಡುಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳ ಅಗ್ನಿ ಅನಾಹುತ ಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸಮಿತಿಗಳನ್ನು ರಚಿಸಲಾಗಿದೆ.
ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಲ್ಲಿ ಮಂಗಳೂರು ವಲಯ ಅಗ್ನಿ ಶಾಮಕ ಅಧಿಕಾರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುಡುಮದ್ದು ತಯಾರಿಕಾ ಘಟಕಗಳಿಗೆ ನಿಯೋಜಿತ ಅಧಿಕಾರಿಗಳು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಮತ್ತು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಸ್ಪೋಟಕಗಳ ನಿಯಮಗಳು 2008 ರಂತೆ ನಿಯಮಾನುಸಾರ ಕೂಲಂಕುಶವಾಗಿ ಪರಿಶೀಲಿಸಿ ದಾಖಲೆಗಳೊಂದಿಗೆ ಸ್ಪಷ್ಟ ಅಭಿಪ್ರಾಯವನ್ನು ಸ್ಪೋಟಕಗಳ ನಿಯಮಗಳು 2008ರಂತೆ ಚೆಕ್ ಲಿಸ್ಟ್ನೊಂದಿಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.
Next Story





