ಕಾಡುಹೊಳೆ ರೈಸ್ ಮಿಲ್ ಮಾಲಕ ಬಾಲಕೃಷ್ಣ ನಾಯಕ್ ನಿಧನ

ಅಜೆಕಾರು: ಕಾಡುಹೊಳೆ ಭಾಗ್ಯೋದಯ ರೈಸ್ ಮಿಲ್ಲಿನ ಮಾಲೀಕ, ಉದ್ಯಮಿ, ಪ್ರಗತಿಪರ ಕೃಷಿಕರಾದ ಬಾಲಕೃಷ್ಣ ನಾಯಕ್ (67) ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಕಾಡುಹೊಳೆಯ ತಮ್ಮ ನಿವಾಸದಲ್ಲಿ ಬೆಳಗ್ಗೆ 7.30 ಸುಮಾರಿಗೆ ಅಸ್ವಸ್ಥರಾದ ಅವರು ಹೃದಯಾಘಾತದಿಂದ ಕುಸಿದುಬಿದ್ದು ನಿಧನರಾಗಿದ್ದಾರೆ.
ಕಾಡುಹೊಳೆಯಲ್ಲಿ ರೈಸ್ ಮಿಲ್ ಉದ್ಯಮ ನಡೆಸುವ ಮೂಲಕ ನೂರಾರು ಜನರಿಗೆ ಉದ್ಯೋಗ ಹಾಗೂ ಬದುಕು ಕಲ್ಪಿಸಿದ್ದಾರೆ. ಪ್ರಸ್ತುತ ಅಡಿಕೆ ಕೃಷಿ ಹಾಗೂ ಕೋಳಿ ಸಾಕಾಣಿಕೆ ಮೂಲಕ ಪ್ರಗತಿಪರ ಕೃಷಿಕರಾಗಿದ್ದರು.
ಪರೋಪಕಾರಿ ಮನೋಭಾವದ ಸಾಧು ಸ್ವಭಾವದವರಾಗಿದ್ದ ಅವರು ಪತ್ನಿ, ಪುತ್ರಿ ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಗಣ್ಯರ ಸಂತಾಪ:
ಬಾಲಕೃಷ್ಣ ನಾಯಕ್ ಅವರ ನಿಧನಕ್ಕೆ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
Next Story





