Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಜಲಸಿರಿ ಯೋಜನೆ ಆರಂಭದಲ್ಲೇ ವಿಫಲ?; ಮನಪಾ...

ಜಲಸಿರಿ ಯೋಜನೆ ಆರಂಭದಲ್ಲೇ ವಿಫಲ?; ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

►24 ಗಂಟೆ ಹೇಳಿ 1 ಗಂಟೆಯೂ ನೀರಿಲ್ಲ! ►ಫೆ. 8ರಂದು ಸಭೆಗೆ ಮೇಯರ್ ನಿರ್ಧಾರ

ವಾರ್ತಾಭಾರತಿವಾರ್ತಾಭಾರತಿ31 Jan 2024 3:20 PM IST
share

ಮಂಗಳೂರು, ಜ.31: ನಗರಕ್ಕೆ 24*7 ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಲಸಿರಿ ಯೋಜನೆ ಪ್ರಾಯೋಗಿಕ ಹಂತದಲ್ಲೇ ವಿಫಲವಾಗಿರುವ ಆರೋಪ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಿಂದ ವ್ಯಕ್ತವಾಗಿದೆ.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಲಸಿರಿ ಯೋಜನೆಯ ಪೈಲಟ್ ಯೋಜನೆಯೇ ವಿಫಲವಾಗಿದೆ ಎಂಬ ಆಕ್ಷೇಪ ಸದಸ್ಯರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆ.8ರಂದು ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ಮೇಯರ್ ನಿರ್ಧರಿಸಿದರು.

ಸದಸ್ಯೆ ಪೂರ್ಣಿಮಾ ಅವರು ತಮ್ಮ ವಾರ್ಡ್ ನಲ್ಲಿ ಕಳೆದ ಹಲವು ಸಮಯದಿಂದ ನೀರಿನ ಸಮಸ್ಯೆ ಉಂಟಾಗಿದ್ದು, ಬಾವಿಗಳು ಕೆಟ್ಟು ಹೋಗಿವೆ. ಒಳಚರಂಡಿ ನೀರು ಬಾವಿ ಸೇರುತ್ತಿದೆ ಎಂದು ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದರು.

ಈ ಸಂದರ್ಭ ಸದಸ್ಯ ನವೀನ್ ಡಿಸೋಜಾ ಮಾತನಾಡಿ, ಕೆಯುಐಡಿಎಫ್ಸಿ ಮೂಲಕ 24*7 ಜಲಸಿರಿ ಯೋಜನೆಯಡಿ ಬೆಂದೂರ್ವಾರ್ಡನ್ನು ಪೈಲಟ್ ಆಗಿ ಆಯ್ಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶಿವಬಾಗ್, ವಾಸ್ಲೇನ್, ಅಥೆನಾ ಈ ಭಾಗದಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ದಿನಕ್ಕೆ 10 ಗಂಟೆ ನೀರು ಬರುತ್ತಿತ್ತು. ಆದರೆ ಜಲಸಿರಿ ವ್ಯವಸ್ಥೆಯಡಿ 24 ಗಂಟೆ ನೀರು ವಾರ್ಡ್ಗೆ ನೀರು ಬರುವುದು 1 ಗಂಟೆ ಮಾತ್ರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಅಶ್ರಫ್ ಅವರು ಮಾತನಾಡಿ, ಜಲ್ಲಿಗುಡ್ಡೆಗೆ ಕಳೆದ 2 ತಿಂಗಳಿನಿಂದ ನೀರೇ ಇಲ್ಲ ಎಂದು ಆಕ್ಷೇಪಿಸಿದರು.

ಸದಸ ವಿನಯ ರಾಜ್ ಮಾತನಾಡಿ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಲಸಿರಿ ಯೋಜನೆಯಡಿ ಬೆಂದೂರು ಸೇರಿದಂತೆ ಮೂರು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲಾಗಿದೆ. 2 ವರ್ಷದಿಂದ ಪೈಲಟ್ ಎಂದು ಹೇಳಿ ಇನ್ನೂ ನೀರು ಪೂರೈಕೆ ಆಗಿಲ್ಲ. ರೆನ್ಗಳನ್ನು ಇನ್ನೂ ಗುರುತಿಸಲಾಗಿಲ್ಲ. ಅಧಿಕಾರಿಗಳು ವಾರ್ಡ್ನ ಸದಸ್ಯರ ಜತೆ ಸಮನ್ವಯತೆಯನ್ನೇ ಹೊಂದಿಲ್ಲ. ಕಾಮಗಾರಿ ವೈಜ್ಞಾನಿಕವಾಗಿ ನಡೆದಿದೆಯೇ ಎಂದು ಪರಿಶೀಲಿಸಿ ನೋಡಲ್ ಅಧಿಕಾರಿ, ಆಯುಕ್ತರು ಬಿಲ್ ಪಾಸ್ ಮಾಡಬೇಕಾಗುತ್ತದೆ. ಆದರೆ ಇದ್ಯಾವುದೂ ಆಗುತ್ತಿಲ್ಲ. ಜಲಸಿರಿ ನೀರು ಪೂರೈಕೆಗಾಗಿ ಅಡ್ಯಾರ್ನಲ್ಲಿ 125 ಕೋಟಿ ರೂ. ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ (ಡಬ್ಲ್ಯುಟಿಪಿ) ಮಾಡಬೇಕಿದೆ. ಆದರೆ ಅಲ್ಲಿಂದ ನೀರನ್ನು ಪೂರೈಕೆ ಮಾಡುವ ಪೈಪ್ಲೈನ್ ಬಗ್ಗೆ ಡಿಪಿಆರ್ ಯೋಜನೆಯಲ್ಲಿ ಸೇರಿಸಿಲ್ಲ. ಪ್ರಾಯೋಗಿಕ ಯೋಜನೆಯಲ್ಲೇ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ ಇನ್ನು ಉಳಿದ ವಾರ್ಡ್ಗಳಲ್ಲಿ ಯೋಜನೆಯ ಗತಿ ಏನು? ಇಷ್ಟೆಲ್ಲಾ ಅವೈಜ್ಞಾನಿಕವಾಗಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ಆಗ್ರಹಿಸಿದರು.

ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರೂ ದನಿಗೂಡಸಿ, 2 ವರ್ಷಗಳಿಂದ ಈ ಯೋಜನೆಯ ಡೆಪ್ಯುಟಿ ಪ್ರಾಜೆಕ್ಟ್ ನಿರ್ದೇಶಕರು ಉತ್ತರದಿಂದ ನುಣುಚಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರಿಗೆ ಪಾವತಿ ಮಾಡುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಆಡಳಿತ, ವಿಪಕ್ಷದ ಸದಸ್ಯರನೇಕರು ಜನವರಿ ತಿಂಗಳಲ್ಲೇ ನಗರದಲ್ಲಿ ನೀರಿನ ಸಮಸ್ಯೆ ಕುರಿತಂತೆ ಸಭೆಯ ಗಮನ ಸೆಳೆದರು. ಈ ಸಂದರ್ಭ ಮೇಯರ್ ಅವರು ತುಂಬೆಯಿಂದ ಅಡ್ಯಾರ್ವರೆಗಿನ ಅನಧಿಕೃತ ನೀರಿನ ಸಂಪರ್ಕಗಳ ಬಗ್ಗೆ ಅಧಕಾರಿಗಳನ್ನು ಪ್ರಶ್ನಿಸಿದರು. ಈಗಾಗಲೇ ಸುಮಾರು 100ಕ್ಕೂ ಅಧಿಕ ಅನಧಿಕೃತ ಸಂಪರ್ಕವಿದ್ದು, ಕೆಲವೆಡೆ 2 ಇಂಚು ಕೆಲವೆಡೆ 3 ಇಂಚ್ ಪೈಪ್ಲೈನ್ಗಳ ಮೂಲಕ ಅಕ್ರಮ ಸಂಪರ್ಕ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಈ ಸಂದರ್ಭ ಸದಸ್ಯೆ ಗಾಯತ್ರಿ ಅವರು ಕಾವೂರು ಕೆರೆಯ ಬಗ್ಗೆ ಪ್ರಸ್ತಾಪಿಸಿ ಸ್ಥಳೀಯವಾಗಿ ಹಂದಿ ಸಾಕಣೆ ಮಾಡುವವರಿಂದ ಕೆರೆಗೆಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಅಲ್ಲಿನ 200 ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ಆನಂದ್ ಅವರು ಪ್ರತಿಕ್ರಿಯಿಸಿ, ಆ ಭಾಗಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿ: ಆಕ್ಷೇಪ

ಲೋಕೋಪಯೋಗಿ ಇಲಾಖೆಯಿಂದ ತಮ್ಮ ವಾರ್ಡ್ನಲ್ಲಿ 60 ಮೀ. ಉದ್ದ 4 ಮೀಟರ್ ಅಗಲಕ್ಕೆ ಕಾಂಕ್ರಿಟೀಕರಣ ಮಾಡಲಾಗಿದೆ. ಈ ಬಗ್ಗೆ ಸದಸ್ಯನಾದ ತನಗೆ ಮಾಹಿತಿಯೇ ನೀಡಿಲ್ಲ ಎಂದು ಸದಸ್ಯ ಅಬ್ದುಲ್ ರವೂಫ್ ಸಭೆಯಲ್ಲಿ ದೂರಿದರು.

ರಸ್ತೆಗಳಲ್ಲಿ ಫುಡ್ಫೆಸ್ಟ್ ಬೇಡ

ಜನಸಾಮಾನ್ಯರು, ರೋಗಿಗಳಿಗೆ ತೊಂದರೆ ಆಗುವ ರೀತಿಯಲ್ಲಿ ರಸ್ತೆಗಳನ್ನು ಮುಚ್ಚಿ ನಗರದಲ್ಲಿ ಫುಡ್ ಫೆಸ್ಟಿವಲ್ ಮಾಡಲಾಗಿದೆ. ಜನರಿಗೆ ಆಗಿರುವ ಸಮಸ್ಯೆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಹಿಂದೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಫುಡ್ ಫೆಸ್ಟಿವಲ್ ಮಾಡಲು ಮುಂದಾದವರಿಗೆ ಸ್ಥಳೀಯ ಮೈದಾನದಲ್ಲಿ ನಡೆಸಲು ಸೂಚಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಫುಡ್ ಫೆಸ್ಟ್ಗೆ ರಸ್ತೆಗಳನ್ನು ಬಳಸಲು ಅವಕಾಶ ನೀಡಿದ್ದು ಯಾಕೆ ಎಂದು ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಶ್ನಿಸಿದರು.

ಉದ್ದಿಮೆದಾರರ ಜತೆ ಸ್ಥಳೀಯರ ತೆರಿಗೆಯೂ ಕಡಿಮೆಯಾಗಲಿ!

ಮನಪಾ ಕಚೇರಿ ಸಮೀಪದ ಪಾಲಿಕೆಯ ಒಡೆತನದ ವಾಣಿಜ್ಯ ಕಟ್ಟಡದ 12 ವರ್ಷಗಳ ಲೀಸ್ ಅವಧಿ ಮುಗಿದು ಹೊಸ ವ್ಯವಸ್ಥೆಯಡಿ ದರ ನಿಗದಿಪಡಿಸಿರುವುದರಿಂದ ಅಲ್ಲಿ ವ್ಯವಹಾರ ನಡೆಸುತ್ತಿರುವ ಉದ್ದಿಮೆದಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪರಿಶೀಲಿಸಲು ಸರಕಾರಕ್ಕೆ ಕಳುಹಿಸಬೇಕು ಎಂದು ಸದಸ್ಯ ಕಿಶೋರ್ ಅವರು ಆಗ್ರಹಿಸಿದರು.

ಸದಸ್ಯ ವಿನಯರಾಜ್ ಪ್ರತಿಕ್ರಿಯಿಸಿ, ಜನಸಾಮಾನ್ಯರ ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ತೊಂದರೆಯಾಗುತ್ತಿದೆ. ಖಾಲಿ ಜಾಗಕ್ಕೂ ತೆರಿಗೆ ಹಾಕುತ್ತಿರುವುದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆಯೂ ಸರಕಾರಕ್ಕೆ ಬರೆಯಲು ಕ್ರಮ ವಹಿಸಿ. ಅಳಕೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ರಚಿಸಿ, ಅದನ್ನು ಟೆಂಪೋ ನಿಲ್ಲಿಸುವ ಪಾರ್ಕಿಂಗ್ ಸ್ಥಳವಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ಉಪ ಮೇಯರ್ ಸುನಿತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೋಗಿಚ್ ಅಮೀನ್, ವರುಣ್ ಚೌಟ, ಗಣೇಶ್ ಉಪಸ್ಥಿತರಿದ್ದರು.

ಸದನದ ಬಾವಿಗಿಳಿದು ಮಲಗಿ ಪ್ರತಿಭಟನೆ!

ಜಲಸಿರಿಯ ಪೈಲಟ್ ಯೋಜನೆಯಡಿ ತಮ್ಮ ವಾರ್ಡ್ನಲ್ಲಿ 24 ಗಂಟೆ ನೀರಿನ ಭರವಸೆಯ ಬದಲಿಗೆ ಬರುತ್ತಿರುವುದು 1 ಗಂಟೆ ನೀರು ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಸಮಸ್ಯೆಗೆ ಪರಿಹಾರ ಬೇಕೆಂದು ಒತ್ತಾಯಿಸಿ ಸದಸ್ಯ ನವೀನ್ ಡಿಸೋಜಾ ಅವರು ಮೇಯರ್ ಪೀಠದೆರುರು ಸದನದ ಬಾವಿಗಿಳಿದು ಮಲಗಿ ಪ್ರತಿಭಟಿಸಿದ ಘಟನೆಗೂ ಮನಪಾ ಸಾಮಾನ್ಯ ಸಭೆ ಸಾಕ್ಷಿಯಾಯಿತು. ವಿಪಕ್ಷದ ನಾಯಕ ಸೇರಿದಂತೆ ಸದಸ್ಯರು ಕೂಡಾ ಮೇಯರ್ ಪೀಠದೆದುರು ಪ್ರತಿಭಟಿಸಿದರು. ಬಳಿಕ ಮೇಯರ್ ಅವರು ಉತ್ತರ ನೀಡುವುದಾಗಿ ಹೇಳಿ ಸದಸ್ಯರನ್ನು ಸಮಾಧಾನ ಪಡಿಸಿ ತಮ್ಮ ಆಸನಗಳಿಗೆ ತೆರುವಂತೆ ಸೂಚಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X