ಭಾರತ ಸೇವಾದಳ ವತಿಯಿಂದ ರಾಷ್ಟ್ರೀಯ ಭಾವ್ಯಕ್ಯತಾ ಮಕ್ಕಳ ಮೇಳ

ಮಂಗಳೂರು: ಭಾರತ ಸೇವಾದಳ ಜಿಲ್ಲಾ ಸಮಿತಿ, ಮಂಗಳೂರು ತಾಲೂಕು ಸಮಿ ಮತ್ತು ಬೆಂಗ್ರೆ ಸಾಂಡ್ಸ್ ಪಿಟ್ ಶಾಲೆಯ ಆಶ್ರಯದಲ್ಲಿ ಬೆಂಗ್ರೆ ಸ್ಯಾಂಡ್ಸ್ ಪಿಟ್ ಮೈದಾನದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮಂಜುನಾಥ್ ಭಂಡಾರಿ ‘ಭಾರತ ಸೇವಾದಳವು ಮಕ್ಕಳಿಗಾಗಿರುವ ಉತ್ತಮ ಸಂಘಟನೆ. ಇದರಲ್ಲಿರುವ ವಿದ್ಯಾರ್ಥಿಗಳು ಜೀವನದುದ್ದಕ್ಕೂ ಶಿಸ್ತನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಶ್ರೇಷ್ಠ ವ್ಯಕ್ತಿಯಾಗುವುದರಲ್ಲಿ ಸಂಶಯವಿಲ್ಲ ಎಂದುರ.
ದ.ಕ.ಜಿಲ್ಲಾ ಡಿಡಿಪಿಐ ದಯಾನಂದ ರಾಮಚಂದ್ರ ನಾಯಕ್, ಬೆಂಗ್ರೆ ಮಹಾಜನ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಮಾತನಾ ಡಿದರು. ಸೇವಾದಳದ ಕೇಂದ್ರ ಸಮಿತಿಯ ಸದಸ್ಯ ಬಶೀರ್ ಬೈಕಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾದಳದ ಮಂಗಳೂರು ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಖಜಾಂಚಿ ಎ.ಸದಾಶಿವ, ವಿಶೇಶ್ವರ ಭಟ್, ಜಿಲ್ಲಾ ದೈಹಿಕ ಶಿಕ್ಷಣಧಿಕಾರಿ ಭುವನೇಶ್,ಶಿಕ್ಷಣ ಇಲಾಖೆಯ ರವಿಶಂಕರ್, ಭರತ್, ಸೇವಾದಳದ ಮುಖ್ಯ ಸಂಘಟಕ ಮಂಜೇಗೌಡ, ಪ್ರೇಮ್‌ಚಂದ್, ಲಾರೆನ್ಸ್ ಡಿಸೋಜ, ಸುಮಾ, ಶಾಲೆಯ ಮುಖ್ಯ ಶಿಕ್ಷಕಿ ಉಮಾಲಕ್ಷ್ಮಿ, ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಕೇಶ್ ಸುವರ್ಣ, ಕೃತಿನ್ ಕುಮಾರ್, ಸುನಿಲ್ ದೇವಾಡಿಗ ಉಪಸ್ಥಿತರಿದ್ದರು.
ಸೇವಾದಳದ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಉದಯ್ ಕುಂದರ್ ವಂದಿಸಿದರು. ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.





