ಕಂಬಳ ಕ್ರೀಡೆಗೆ ಪ್ರಪ್ರಥಮ ಬಾರಿಗೆ ಆಧುನಿಕ ತಂತ್ರಜ್ಞಾನದ ಮೆರುಗು: ಕಂಬಳ ಸಮಿತಿ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು, ಕಂಬಳ ಕ್ರೀಡೆಗೆ ಆಧುನಿಕ ಸ್ಪರ್ಶವನ್ನು ನೀಡಿ ನಿಖರ ಫಲಿತಾಂಶದೊಂದಿಗೆ ಕ್ರೀಡೆಯನ್ನು ನಿಗಧಿತ ಸಮಯದಲ್ಲಿ ಮುಕ್ತಾಯಗೊಳಿಸುವ ಸಲುವಾಗಿ ನೂತನ ತಂತ್ರಜ್ಞಾನವುಳ್ಳ ಸ್ವಯಂಚಾಲಿತ ಸಮಯ ಗೇಟ್ ವ್ಯವಸ್ಥೆ ಹಾಗೂ ಫೋಟೋ ಫಿನಿಶ್ ಫಲಿತಾಂಶ ಅಳವಡಿಸಬೇಕೆಂದು ತೀರ್ಮಾನಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಅನೇಕ ಕಂಬಳ ಸಮಿತಿಯು ರಚನೆಯಾಗಿದ್ದು, ಆಯಾ ಸಮಿತಿಯು ಕಂಬಳ ಕ್ರೀಡೆಯನ್ನು ಮುನ್ನಡೆಸಿಕೊಂಡು ಬರುತ್ತಿದೆ. ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನವರೆಗೆ ಕಂಬಳ ಕೂಟ ಏರ್ಪಡಿಸಲಾಗುತ್ತದೆ. ಕರಾವಳಿಯಲ್ಲಿ ಎರಡನೇ ಬಾರಿಗೆ ಬೆಳೆಗೆ ಬಿತ್ತನೆ ಮಾಡಲು ಆರಂಭಿಸುವ ಸಮಯ.
ಕಂಬಳ ಕ್ರೀಡೆ ಕೂಡ ಆಧುನಿಕ ಸ್ಪರ್ಶವನ್ನು ಪಡೆದುಕೊಳ್ಳುವಂತಾಗಿದೆ. ಕರಾವಳಿ ಭಾಗದ ಈ ಗ್ರಾಮೀಣ ಕಂಬಳ ಕ್ರೀಡೆಯಲ್ಲಿ ಈ ಹಿಂದೆ ಸುಮಾರು 150 ಜೋಡಿ ಕೋಣಗಳು ಭಾಗವಹಿಸುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ 250ಕ್ಕೂ ಹೆಚ್ಚು ಜೋಡಿ ಕೋಣಗಳು ಕಂಬಳ ಕೂಟದಲ್ಲಿ ಭಾಗವಹಿಸುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ ಸುಮಾರು 200 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಕಂಬಳ ಕೂಟವು ಮೊದಲನೆಯ ದಿನ ಬೆಳಿಗ್ಗೆ ಪ್ರಾರಂಭ ಗೊಂಡರೆ ಎರಡನೆಯ ದಿನ ರಾತ್ರಿ ಮುಕ್ತಾಯಗೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸುಮಾರು 250ಕ್ಕೂ ಅಧಿಕ ಜೋಡಿ ಕೋಣಗಳು ರಾಜ್ಯದ ಮೂಲೆ ಮೂಲೆಗಳಿಂದ ಕಂಬಳ ಕ್ರೀಡೆಯಲ್ಲಿ ಭಾಗವಹಿಸಲ್ಪಡುತ್ತಿದ್ದು, ಸ್ಪರ್ಧೆಯು ಸತತ ವಾಗಿ 3 ದಿನಗಳ ಕಾಲ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಭಾಗವಹಿಸುವುದರಿಂದ ನಿಗಧಿತ ಸಮಯದಲ್ಲಿ ಕ್ರೀಡೆಯನ್ನು ಮುಕ್ತಾಯಗೊಳಿಸಲು ಕಷ್ಟಕರವಾಗುತ್ತಿದೆ. ಏಕೆಂದರೆ ಕ್ರೀಡೆಯ ಪ್ರಾರಂಭದಲ್ಲಿ ಕೋಣಗಳನ್ನು ಸರಿಯಾದ ಜಾಗದಲ್ಲಿ ನಿಲ್ಲಿಸುವುದು ಹಾಗೂ ಕೋಣಗಳ ಓಟದ ಮುಕ್ತಾಯ ಹಂತದಲ್ಲಿ ಯಾರು ಮೊದಲು ಮುಕ್ತಾಯ ಹಂತವನ್ನು ಮುಟ್ಟಿದರು.
ಇವೆಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಫಲಿತಾಂಶವನ್ನು ನೀಡಲು ಬಹಳ ,ಇದನ್ನು ಮನಗಂಡು ಜಿಲ್ಲಾ ಕಂಬಳ ಸಮಿತಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು, ಕಂಬಳ ಸಮಿತಿ ಈ ವಿನೂತನ ತಂತ್ರಜ್ಞಾನದಿಂದ ಕ್ರೀಡೆಯಲ್ಲಿ ಸಮಯವು ಪೋಲಾಗದೆ ನಿಖರ ಫಲಿತಾಂಶಗಳು ದೊರಕುವಂತಾಗುತ್ತದೆ.ಈ ತಂತ್ರಜ್ಞಾನವನ್ನು ಕಂಬಳ ಕ್ರೀಡೆಗೆ ಅಳವಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಬಳ ಹೆಸರುವಾಸಿಯಾಗಬೇಕೆಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ ಶೆಟ್ಟಿಯವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೋದ್ಯಮದಲ್ಲಿ ಹೆಸರು ವಾಸಿಯಾಗಿರುವ ಅದಾನಿ ಸಂಸ್ಥೆಗೆ ಮನವಿಯನ್ನು ಸಲ್ಲಿಸಿದರು. ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಅವರು ಈ ಮನವಿಗೆ ಕೂಡಲೆ ಸ್ಪಂದಿಸಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡೆ, ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುತ್ತಾ ಬರುತ್ತಿರುವ ಅದಾನಿ ಸಮೂಹದ ಸಿಎಸ್‌ಆರ್ ಅಂಗವಾದ ಆದಾನಿ ಫೌಂಡೇಷನ್ ಸಂಸ್ಥೆಯ ವತಿಯಿಂದ ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ರೂ. 10 ಲಕ್ಷದ ವಿಶೇಷ ಅನುದಾನವನ್ನು ಜಿಲ್ಲಾ ಕಂಬಳ ಸಮಿತಿಗೆ ನೀಡಲು ಮುಂದಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ರೂ. 10 ಲಕ್ಷ ಅದಾನಿ ಫೌಂಡೇಶನ್ ಅನುದಾನದಿಂದ ಇದೇ ಪ್ರಪ್ರಥಮ ಬಾರಿಗೆ ಕಂಬಳ ಕ್ರೀಡೆಗೆ ಸ್ವಯಂಚಾಲಿತ ಸಮಯ ಗೇಟ್ ವ್ಯವಸ್ಥೆ ಮತ್ತು ಫೋಟೋ ಫಿನಿಶ್ ಫಲಿತಾಂಶದ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಕಂಬಳದ ಸಮಯವನ್ನು ಪೋಲಾಗದಂತೆ ಹಾಗೂ ನಿಖರ ಫಲಿತಾಂಶವನ್ನು ತಿಳಿಯಲು ಉಪಯುಕ್ತವಾಗಿದೆ. ಈ ವ್ಯವಸ್ಥೆಯು ದಿನಾಂಕ 03ನೇ ಫೆಬ್ರವರಿ 2024 ರಂದು ನಡೆಯುವ ಐಕಳ ಕಂಬಳದಲ್ಲಿ ಅಳವಡಿಸುವುದರ ಮೂಲಕ ಗ್ರಾಮೀಣ ಕ್ರೀಡೆಗೆ ಆಧುನಿಕ ತಂತ್ರಜ್ಞಾನದ ಮೆರುಗು ನೀಡಿದಂತಾಗುತ್ತದೆ. ಈ ತಂತ್ರಜ್ಞಾನವನ್ನು ಎಲ್ಲಾ ಕಂಬಳ ಕ್ರೀಡೆಗೂ ಅಳವಡಿಸಲಾ ಗುವುದುಎಂದು ಐಕಳ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಕಂಬಳ ಸಮಿತಿಯ ಪದಾಧಿಕಾರಿಗಳಾದ ಚಿತ್ತರಂಜನ್ ಭಂಡಾರಿ, ಶ್ರೀಕಾಂತ ಭಟ್, ರೋಹಿತ ಹೆಗ್ಡೆ, ಚಂದ್ರಹಾಸ ಶೆಟ್ಟಿ, ಶಾಂತರಾಮ ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ, ಲೋಕೇಶ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.







