ವಾಮಂಜೂರು: ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ

ಮಂಗಳೂರು, ಜ.31: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್/ವೈಆರ್‌ಸಿ ಘಟಕವು ಯಂಗ್ ಇಂಡಿ ಯನ್ ಸಹಯೋಗದಲ್ಲಿ ಕಾಲೇಜಿನ ಆವರಣದಿಂದ ವಾಮಂಜೂರು ಜಂಕ್ಷನ್‌ವರೆಗೆ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಮತ್ತು ರ್ಯಾಲಿಯನ್ನು ಆಯೋಜಿಸಿತು.
ಕಾಲೇಜಿನ ಪ್ರಾಂಶುಪಾಲ ಡಾ ರಿಯೊ ಡಿಸೋಜ, ನಿರ್ದೇಶಕ ಫಾ. ವಿಲೈಡ್ ಪ್ರಕಾಶ್ ಡಿಸೋಜ, ಸಹಾಯಕ ನಿರ್ದೇಶಕ ಫಾ. ಕೆನೆತ್ ಕ್ರಾಸ್ತಾ, ಡಾ.ಪುರುಷೋತ್ತಮ ಚಿಪ್ಪಾರ್, ಡಾ. ರಮಾನಂದ, ರಾಕೇಶ್ ಲೋಬೋ, ಪ್ರತಿಭಾ ಮತ್ತಿತರರು ಪಾಲ್ಗೊಂಡಿದ್ದರು.
ಎನ್‌ಎಸ್‌ಎಸ್ ಸ್ವಯಂಸೇವಕರು ಬೀದಿ ನಾಟಕ ಪ್ರದರ್ಶಿಸಿದರು. ವಾಮಂಜೂರು ಜಂಕ್ಷನ್‌ನಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದರು.
Next Story





