ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಮೊಹಮ್ಮದ್ ಅಪ್ಲಾ ಅಮನ್ ಶಾಫಿಗೆ ಚಿನ್ನದ ಪದಕ

ಕೊಣಾಜೆ: ಮಹಾರಾಷ್ಟ್ರದ ಅಂಧೇರಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಏಷ್ಯನ್ ಶಿಟೊ-ರ್ಯು ಸ್ಪೋರ್ಟ್ಸ್ ಕರಾಟೆ-ಡು ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡಬಿದ್ರಿ ಯ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಅಪ್ಲಾ ಅಮನ್ ಶಾಫಿ 14 ವರ್ಷ ವಯೋಮಿತಿಯ 60 ಕೆಜಿ ಕುಮಿಟೆ ವಿಭಾಗ ದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗೂ ಕಟಾ ವಿಭಾಗ ದಲ್ಲಿ ಕಂಚಿನ ಪದಕಗಳಿಸಿದ್ದಾರೆ.
ಈ ಚಾಂಪಿಯನ್ ಶಿಪ್ ನಲ್ಲಿ ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ಭಾಗವಹಿಸಿದ್ದವು.
ಕೊಣಾಜೆಯ ಅಲ್ ಅಮೀನ್ ಹಾಗೂ ರೆಹನಾ ದಂಪತಿಯ ಪುತ್ರನಾಗಿರುವ ಅಮನ್ ಶಾಫಿಯವರು ರೆನ್ಸಿ ಮುಹಮ್ಮದ್ ನದೀಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story





