ಬಡ್ಡೂರು : ಜಮೀಯ್ಯತುಲ್ ಫಲಾಹ್ ಸಂಸ್ಥೆಯಿಂದ ಕೊಳವೆ ಬಾವಿ ನಿರ್ಮಾಣ

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ವತಿಯಿಂದ ಬಂಟ್ವಾಳ ತಾಲೂಕಿನ ಬಡ್ಡೂರು ಜುಮಾ ಮಸೀದಿಯ ಆವರಣದಲ್ಲಿ ಮಸೀದಿ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ನೀರು ಪೂರೈಕೆಯಾಗುವಂತೆ ಕೊಳವೆ ಬಾವಿಯನ್ನು ನಿರ್ಮಿಸಿ, ಅದರ ಉದ್ಘಾಟನೆಯನ್ನು ಇಂದು ನೆರೆವೇರಿಸಿದರು.
ಖತೀಬ್ ಉಸ್ತಾದ್ ಸಾದಿಕ್ ಅಲಿ ಅವರು ಪ್ರಾರ್ಥಿಸಿದರು. ಜಮೀಯ್ಯತುಲ್ ಫಲಾಹ್ ನಗರ ಘಟಕದ ಅಧ್ಯಕ್ಷ ಬಶೀರ್ ಬಿ. ಎಸ್. ಅವರು ಉದ್ಘಾಟನೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಫರ್ವೀಝ್ ಆಲಿ ವಹಿಸಿದ್ದರು.
ಸಮಾರಂಭದಲ್ಲಿ ಜಮೀಯ್ಯತುಲ್ ಫಲಾಹ್ ನಗರ ಘಟಕದ ಪದಾಧಿಕಾರಿಗಳಾದ ಅಬ್ದುಲ್ ಖಾದರ್ ಸಾಹೇಬ್, ಅಹ್ಮದ್ ಬಾವ, ಇಸ್ಮಾಯಿಲ್ ಕೆ., ಜಮಾತ್ ಕಾರ್ಯದರ್ಶಿ ಮುಸ್ತಫಾ, ಖ್ಯಾತ ಸಾಹಿತಿ ಮೊಹಮ್ಮದ್ ಬಡ್ಡೂರು ಉಪಸ್ಥಿತರಿದ್ದರು.
ನಝಿರ್ ಅಹ್ಮದ್ ಸ್ವಾಗತಿಸಿ, ಫಯಾಝ್ ಜಿ. ಎ. ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಹನೀಫ್ ಮಾಸ್ಟರ್ ಅರ್ಲ ನಿರೂಪಿಸಿದರು.
Next Story







