ಹಣಕಾಸು ಸಚಿವರು ಅನೇಕ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ: ಪ್ರೊ. ಎಂ.ಎಸ್. ಮೂಡಿತ್ತಾಯ

ಪ್ರೊ. ಎಂ.ಎಸ್. ಮೂಡಿತ್ತಾಯ
ಮಂಗಳೂರು : ನಿರೀಕ್ಷಿಸಿದಂತೆ ಇದೊಂದು ಮಧ್ಯಂತರ ಬಜೆಟ್ ಆಗಿದೆ. ಹಣಕಾಸು ಸಚಿವರು ಅನೇಕ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಅವರು ಮಾಡಿದ ಕೆಲವು ಪ್ರಸ್ತಾಪಗಳಲ್ಲಿ ತಾಂತ್ರಿಕ ಪರಿಣತ ಯುವ ಸಮೂಹಕ್ಕೆ ಉದ್ದಿಮೆಗಳನ್ನು ಪ್ರಾರಂಭಿಸಲು ಬಡ್ಡಿ ರಹಿತ ಸಾಲ ನೀಡಲು 1 ಲಕ್ಷ ಕೋಟಿ ರೂ. ಮೀಸಲಿರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್, ಡೇಟಾ ಸೈನ್ಸಸ್ ಮತ್ತಿತರ ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಶಿಕ್ಷಣ ಪಡೆದವರಿಗೆ ಇದು ಸಹಕಾರಿಯಾಗಬಹುದು ಎಂದು ನಿಟ್ಟೆ ವಿವಿ ಉಪಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





