ತುಂಬೆ, ಪುದು, ಅಡ್ಯಾರ್ ಗ್ರಾಪಂ ವ್ಯಾಪ್ತಿ ಅಕ್ರಮ ನೀರು ಸಂಪರ್ಕ ತೆರವು ಕಾರ್ಯಾಚರಣೆ

ಮಂಗಳೂರು: ತುಂಬೆ ಅಣೆಕಟ್ಟಿನಿಂದ ಪಂಪ್ ಮಾಡಲಾಗುವ ಕುಡಿಯು ನೀರು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಮರ್ಪಕ ಪೂರೈಕೆಯಾಗದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡ ಗಳು ತುಂಬೆ, ಪುದು, ಅಡ್ಯಾರ್ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡೆಯುತ್ತಿದ್ದ ನೀರು ಸಂಪರ್ಕಗಳನ್ನು ಶನಿವಾರ ತೆರವುಗೊಳಿಸಿವೆ.
ಈ ಗ್ರಾಪಂ ವ್ಯಾಪ್ತಿಯ ಕಟ್ಟಡ ರಚನೆಗೆ, ವಾಣಿಜ್ಯ ಉದ್ದೇಶಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಖ್ಯ ಕೊಳವೆಯಿಂದ ಅನಧಿಕೃತ ಜೋಡಣೆ ಮೂಲಕ ನೀರು ಬಳಕೆ ಮಾಡುತ್ತಿರುವುದನ್ನು ಶನಿವಾರ ಅಧಿಕಾರಿಗಳು ಪತ್ತೆ ಹಚ್ಚಿದರು.
ಅಲ್ಲದೆ ಪೊಲೀಸ್ ಇಲಾಖೆ ಮತ್ತು ಗ್ರಾಪಂ ಪಿಡಿಒ ಸಹಕಾರದೊಂದಿಗೆ ತೆರವುಗೊಳಿಸಿದರು ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





