ಯುನಿವೆಫ್-ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು: ‘ಸುಶಿಕ್ಷಿತ, ಸುರಕ್ಷಿತ, ಸಚ್ಛರಿತ ಮತ್ತು ಸಹಿಷ್ಣು ಹಾಗೂ ಸಮಾಜಕ್ಕಾಗಿ ಯುನಿವೆಫ್ ಕರ್ನಾಟಕ’ ಎಂಬ ಧ್ಯೇಯ ವಾಕ್ಯದಲ್ಲಿ ಫೆ.2ರಿಂದ 16ರ ತನಕ ನಡೆಯಲಿರುವ ಸದಸ್ಯತ್ವ ಅಭಿಯಾನಕ್ಕೆ ನಗರದ ಫಳ್ನೀರ್‌ನ ದಾರುಲ್ ಇಲ್ಮ್‌ನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಸಮಾಜದ ಪ್ರತಿಯೊಂದು ರಂಗದಲ್ಲೂ ಮುಸ್ಲಿಮರು ಬಹಳಷ್ಟು ಹಿಂದುಳಿದಿದ್ದಾರೆ. ದೂರಗಾಮಿ ಯೋಜನೆ, ಸಮರ್ಥ ನಾಯಕತ್ವದ ಕೊರತೆಯು ಈ ಸಮುದಾಯವನ್ನು ಬಾಧಿಸಿದೆ. ಸಮುದಾಯದ ಸಮಸ್ಯೆಗಳಿಗೆ ಪರಿಹಾರವೇನು ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿ ದಿದೆ. ಸಾವಿರಾರು ಪ್ರಯತ್ನಗಳ ಬಳಿಕವು ಕೆಲವು ರಂಗಗಳಲ್ಲಿ ಈ ಸಮುದಾಯ ಅಭಿವೃದ್ಧಿಯನ್ನು ಸಾಧಿಸಿದರೂ ಬಹುತೇಕ ಸಂದರ್ಭ ತನ್ನ ಅಸ್ತಿತ್ವವನ್ನೇ ರಕ್ಷಿಸುವ ಹಂತಕ್ಕೆ ಬಂದು ತಲುಪಿವೆ. ಈ ನಿಟ್ಟಿನಲ್ಲಿ ಯುನಿವೆಫ್ ಕರ್ನಾಟಕ ಏರ್ಪಡಿಸಿರುವ ಸದಸ್ಯತ್ವ ಅಭಿಯಾನವನ್ನು ಯಶಸ್ಸಿಗೊಳಿಸಬೇಕು ಎಂದು ಕರೆ ನೀಡಿದರು.
ಸಈದ್ ಅಹ್ಮದ್ ಕಿರಾಅತ್ ಪಠಿಸಿದರು. ಸಹ ಸಂಚಾಲಕ ವಕಾಝ್ ಅರ್ಸಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಚಾಲಕ ಆಸಿಫ್ ಕುದ್ರೋಳಿ ಉಪಸ್ಥಿತರಿದ್ದರು.





