ಕುಟುಂಬ ವೈದ್ಯ ಪದ್ಧತಿ ನಶಿಸಿದರೆ ಸಮಾಜಕ್ಕೆ ನಷ್ಟ: ಡಾ ಕೆ. ಮೋಹನ್ ಪೈ

ಮಂಗಳೂರು: ದೇಶದ ಆರೋಗ್ಯ ಕ್ಷೇತ್ರದ ಬೆನ್ನೆಲುಬಾಗಿರುವ ಎಂಬಿಬಿಎಸ್ ಕುಟುಂಬ ವೈದ್ಯರು ಹಾಗೂ ಕುಟುಂಬ ವೈದ್ಯ ಪದ್ಧತಿಯು ಸಮಾಜದ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ನಶಿಸುತ್ತಿದೆ. ವಿಶ್ವದ ಶೇ.೮೦ರಷ್ಟು ಮಂದಿಯ ಆರೋಗ್ಯ ಸೇವೆ ಮಾಡುವ ಕುಟುಂಬ ವೈದ್ಯರು ಹಾಗೂ ವೈದ್ಯಪದ್ಧತಿ ನಶಿಸಿದರೆ ಅದು ಸಮಾಜಕ್ಕೆ ಅತೀ ದೊಡ್ಡ ನಷ್ಟವಾಗಬಹುದು ಎಂದು ನಗರದ ಹೃದಯ ಸಂಬಂಧಿ ಕಾಯಿಲೆಗಳ ತಜ್ಞ ಡಾ. ಕೆ. ಮೋಹನ್ ಪೈ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೊಟೇಲ್‌ನಲ್ಲಿ ‘ಮಂಗಳೂರು ಕುಟುಂಬ ವೈದ್ಯರ ಸಂಘದ ವೈದ್ಯರಿಗೆ ಅಧಿಕ ರಕ್ತದೊತ್ತಡ ನಿಭಾವಣೆಯ ಹೊಸ ಬೆಳವಣೆಗೆ ಕುರಿತು ಅವರು ಮಾತನಾಡಿದರು.
ರಾಜ್ಯ ಕುಟುಂಬ ವೈದ್ಯರ ವಿಭಾಗದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಡಾ. ಕೆ. ಭುಜಂಗ ಶೆಟ್ಟಿ, ಡಾ. ಕುಮಾರ ಸ್ವಾಮಿ. ಡಾ. ಅಶೋಕ್ ಕುಮಾರ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಡಾ. ರೆಡ್ಡಿ ಲ್ಯಾಬ್ಸ್ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ಕಾರ್ಯದರ್ಶಿ ಡಾ. ಜಿ.ಕೆ. ಭಟ್ ಸಂಕಬಿತ್ತಿಲು ನಿರ್ವಹಿಸಿದರು.
ಸಂಘದ ಅಧ್ಯಕ್ಷ ಡಾ.ವಿವೇಕಾನಂದ ಭಟ್ ಸ್ವಾಗತಿಸಿದರು. ಡಾ ಶೇಖರ್ ಪೂಜಾರಿ ಪ್ರಾರ್ಥಿಸಿದರು. ಡಾ. ಶಾಂತಾರಾಮ ಕಾಮತ್ ವಂದಿಸಿದರು.







