ಹಳೆಯಂಗಡಿ ಕದಿಕೆ ಉರೂಸ್ ಗೆ ಚಾಲನೆ

ಹಳೆಯಂಗಡಿ: ಹೊಸಂಗಡಿ ಕದಿಕೆಯ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ (ಖ.ಸಿ) ಅವರ ಉರೂಸ್ ಸಮಾರಂಭಕ್ಕೆ ಬುಧವಾರ ಚಾಲನೆ ದೊರೆಯಿತು.
ಸಮಾರಂಭವನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಶೈಖುನಾ ಅಲ್ಹಾಜ್ ಮುಹಮ್ಮದ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್ ಉದ್ಘಾಟಿಸಿ ದುವಾ ಆಶೀರ್ವಚನ ಗೈದರು.
ಹಳೆಯಂಗಡಿ ಕದಿಕೆ ಜುಮಾ ಮಸೀದಿಯ ಖತೀಬ್ ಪಿ.ಎ. ಅಬ್ದುಲ್ಲಾ ಝೈನಿ ಬಡಗನ್ನೂರು ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ವಿ.ಕೆ. ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು ಅವರು ಆಧುನಿಕ ಯುವ ಜನತೆ ವಿಷಯದ ಕುರಿತು ಮತಪ್ರಸಂಗ ನಡೆಸಿಕೊಟ್ಟರು.
ಮುಖ್ಯ ಅಥಿತಿಗಳಾಗಿ ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ, ಸಂತೆಕಟ್ಟೆ ಹಿಮಾಯ ತುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಅಬೂಬಕರ್ ಮದನಿ, ಇಂದಿರಾನಗರ ಖಿಲ್ರಿಯಾ ಮದರಸದ ಸದರ್ ಮುಅಲ್ಲಿಂ ಇಮ್ರಾನ್ ಮಖ್ದೂಮಿ ಕೃಷ್ಣಾಪುರ, ಕದಿಕೆ ನೂರುಲ್ ಹುದಾ ಮದರಸದ ಸದರ್ ಮುಅಲ್ಲಿಂ ಮುಹಮ್ಮದ್ ಶರೀಫ್ ಮದನಿ ಮತ್ತು ಕೇಂದ್ರ ಜುಮಾಮಸೀದಿಗೆ ಒಳಪಡುವ ಎಲ್ಲಾ ಮಸೀದಿ, ಮದರಸಗಳ ಉಸ್ತಾದರು ಉಸ್ಥಿತರಿದ್ದರು.
ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಕುಡುಂಬೂರು ಸಾಗ್, ಉರೂಸ್ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ಕದಿಕೆ, ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಎಚ್.ಕೆ., ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಕದಿಕೆ ನೂರುಲ್ ಹುದಾ ಮದರಸದ ಅಧ್ಯಕ್ಷ ಅಬ್ದುಲ್ ಅಝೀಝ್, ಹಿಮಾಯತುಲ್ ಇಸ್ಲಾಮ್ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಪಡುತೋಟ, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಂ.ಎಚ್. ಮುಹಮ್ಮದ್ ಮುಸ್ತಫಾ, ಇಂದಿರಾ ನಗರ ಖಿಲ್ರಿಯಾ ಮಸೀದಿಯ ಅಧ್ಯಕ್ಷ ಯೂಸುಫ್, ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಕೆ. ಸಾಹುಲ್ ಹಮೀದ್ ಕದಿಕೆ, ಜುಮಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಕಜಕತೋಟ, ಜಲಾಲಿಯಾ ರಾತೀಬ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕದಿಕೆ, ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಬಶಿಋ್ ಕಲ್ಲಾಪು, ಉರೂಸ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಮೇಗಿನ ಮನೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಸ್ವಾಗತಿಸಿ, ಇರ್ಷಾದ್ ಕದಿಕೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.







