ಕಿನ್ಯ: ಧಾರ್ಮಿಕ ಉಪನ್ಯಾಸ ಸಮಾರೋಪ

ಉಳ್ಳಾಲ: ಅಧ್ಯಯನ ಒಂದೇ ಮಾನವ ಅಭಿವೃದ್ಧಿಗೆ ಸಾಕಾಗುವುದಿಲ್ಲ. ಮಾಡಿಕೊಂಡ ಅಧ್ಯಯನವನ್ನು ಪಾಲಿಸಿಕೊಂಡು ಹೋಗುವ ಜೊತೆಗೆ ಸೌಹಾರ್ದತೆಗೆ ಒತ್ತು ನೀಡಿದರೆ ಮಾತ್ರ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಫೈಸಲ್ ನಗರ ಮಸೀದಿಯ ಮುದರ್ರಿಸ್ ಝುಬೈರ್ ದಾರಿಮಿ ಹೇಳಿದರು.
ಅವರು ಕಿನ್ಯ ದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯ ಸ್ವಾಗತಿಸಿದರು. ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ ದುಆ ಆಶೀರ್ವಚನ ನೀಡಿದರು.
ಕೂಟು ಝಿಯಾರತ್ ನ ನೇತೃತ್ವವನ್ನು ಆನೇಕಲ್ ಜುಮ್ಮಾ ಮಸೀದಿ ಖತೀಬ್ ಸಯ್ಯದ್ ಇಬ್ರಾಹಿಂ ಬಾತಿಷ ತಂಙಳ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಯ್ಯದ್ ಅಮೀರ್ ತಂಙಳ್, ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ, ಕಿನ್ಯ ಕುತುಬಿಯ ಮದ್ರಸದ ಸದ್ರ್ ಫಾರೂಕ್ ದಾರಿಮಿ, ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾ ಧಿಕಾರಿ ಬಾವು ಹಾಜಿ ಸಾಗ್, ಉಪಾಧ್ಯಕ್ಷ ರುಗಳಾದ ಇಬ್ರಾಹಿಂ, ಕುಂಞಿ ಹಾಜಿ, ಅಶ್ರಫ್ ಮಾರಾಠಿಮೂಲೆ, ಜೊತೆ ಕಾರ್ಯದರ್ಶಿ ಹಮೀದ್ ಕಿನ್ಯ, ಇಸ್ಮಾಯಿಲ್ ಸಾಗ್, ಹಳೆ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.







