ಬಂಟ್ವಾಳ : ಫೈಬರ್ ಕೇಬಲ್ ತುಂಡರಿಸಿದ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ : ಕಂಪೆನಿಯೊಂದರ ಆಪ್ಟಿಕ್ ಫೈಬರ್ ಕೇಬಲ್ ತುಂಡರಿಸಿ ನಷ್ಟ ಉಂಟು ಮಾಡಿದ ಆರೋಪದಲ್ಲಿ ಆದೇ ಕಂಪೆನಿಯ ಮಾಜಿ ಉದ್ಯೋಗಿಗಳ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಪಿಡಿಕ್ ಇನ್ಫೋಟೆಕ್ ಕಂಪೆನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ನವೀನ್ ಪಿಂಟೋ ಹಾಗೂ ಪ್ರೀತಂ ಪಿಂಟೋ ಅವರು ಅಮ್ಟಾಡಿ ಗ್ರಾಮದ ಲೊರೆಟ್ಟೋ ಚರ್ಚ್ ಬಳಿ ಕಂಪೆನಿಗೆ ಸೇರಿದ ಸುಮಾರು 1.50 ಲಕ್ಷ ಮೌಲ್ಯದ ಕೇಬಲ್ ತುಂಡರಿಸಿ ನಷ್ಟ ಉಂಟುಮಾಡಿದ್ದಾರೆ ಎಂದು ಕಂಪೆನಿಯ ಉದ್ಯೋಗಿ ಸೊರ್ನಾಡು ನಿವಾಸಿ ವೀರೇಶ್ ಪಿಂಟೋ ದೂರು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





