ನಮಗೆ ಏಕ ಸಂಸ್ಕೃತಿ ಬೇಕಾಗಿಲ್ಲ, ಬಹು ಸಂಸ್ಕೃತಿ ಬೇಕು: ಗಣನಾಥ ಎಕ್ಕಾರು

ಉಳ್ಳಾಲ: ಇತಿಹಾಸದಲ್ಲಿ ಹುಡುಕಿಕೊಂಡು ಹೋದರೆ ಅಬ್ಬಕ್ಕನಿಗಿಂತ ಜಾಸ್ತಿ ಪೋರ್ಚುಗೀಸರ, ಇಂಗ್ಲಿಷರ ರಾಜ್ಯಭಾರದ ಮಾಹಿತಿ ಸಿಗುತ್ತದೆ. ಆದರೆ ಅಬ್ಬಕ್ಕಳ ಹೋರಾಟ ಉಳ್ಳಾಲ ಭಾಗದಲ್ಲಿ ಮಹತ್ವ ಪಡೆದಿತ್ತು ಎಂದು ಸಾಹಿತಿ ವಿರ್ಮಶಕ ಪ್ರೊ ಕೆ ಫಣಿರಾಜ್ ಹೇಳಿದರು
ಅವರು ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ತುಳುನಾಡಿನ ವರ್ತಮಾನದ ಸವಾಲುಗಳು, ಉಳ್ಳಾಲ ದ ರಾಣಿ ಅಬ್ಬಕ್ಕಳ ಪ್ರತಿರೋಧದ ಮರು ವ್ಯಾಖ್ಯಾನ ಎಂಬ ವಿಚಾರ ದ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1542ರ ಬಳಿಕ ಅಬ್ಬಕ್ಕಳ ಹೋರಾಟ ಇತ್ತು. ಹಿಂದಿನ ಕಾಲದಲ್ಲಿ ಇದ್ದ, ವಿಚಾರ, ಸಂಪ್ರದಾಯ ಆಧುನಿಕ ಜಗತ್ತಿನಲ್ಲಿ ಇಲ್ಲ. ಹಿಂದಿನ ಕಾಲದಲ್ಲಿ ನಡೆದ ಘಟನೆ ಬಗೆ ಕೆದಕುತ್ತಾ ಹೋದರೆ ಹಲವು ವಿಚಾರಗಳು ಸಿಗುತ್ತದೆ. ಏನು ಬದಲಾವಣೆ ಆಗಿದೆ ಎಂಬುದು ಕೂಡ ಗೊತ್ತಾಗುತ್ತದೆ. ತುಳು ನಾಡಿನ ವರ್ತಮಾನದ ಬಗ್ಗೆ ನೋಡಿದರೆ ದೈವ ದೇವರುಗಳ ನಂಬಿಕೆ ವಿಚಾರ ಮುನ್ನೆಲೆಗೆ ಬರುತ್ತದೆ 18ನೇ ಶತಮಾನದ ದಿಂದಹಿಡಿದು 21 ನೇಶತಮಾನದಲ್ಲಿ ಏನು ಬದಲಾವಣೆ ಕಂಡಿದೆ ಎಂಬುದು ಕೂಡ ವಿಮರ್ಶೆ ಮಾಡಬೇಕಾಗಿದೆ ಶಿಕ್ಷಣ ಬೆಳೇಸುವ ಸಲುವಾಗಿ ರಾತ್ರಿ ಶಾಲೆಗಳನ್ನು ನಡೆಸುತ್ತಿದ್ದರು. ಸಂವಿಧಾನ 1950 ರಲ್ಲಿ ಜಾರಿಗೆ ಬಂದಿದ್ದರೂ ಕೂಡಾ ಬೌದ್ಧ ನಾ ಕಾಲದಲ್ಲಿ ಸಂವಿಧಾನ ನದ ಬಗೆ ರೂಪುರೇಷೆಗಳ ತಯಾರಿ ನಡೆಯುತ್ತಿತ್ತು. ಸಂವಿಧಾನ ಮತ್ತು ಸಾಮಾಜಿಕ ಮೌಲ್ಯಗಳ ಮಹತ್ವ ಮತ್ತು ರಚನೆ ಬಗ್ಗೆ ಈ ಹಿಂದೆಯೇ ಚಿಂತನೆ ನಡೆದಿದೆ ಎಂದು ಹೇಳಿದರು.
ಖ್ಯಾತ ಜನಪದ ವಿದ್ವಾಂಸ ಡಾ ಗಣನಾಥ ಎಕ್ಕಾರು ವಿಚಾರ ಮಂಡಿಸಿ ಮಾತನಾಡಿ, ತುಳುನಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ಅಬ್ಬಕ್ಕ ರಾಣಿ ಯಾವ ಸಂದೇಶ ಕೊಡುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಅಬ್ಬಕ್ಕ ರಾಣಿ ಜೀವನ, ಇತಿಹಾಸದ ಬಗೆ ಹಲವು ವಿದ್ವಾಂಸರು ಗಮನ ಸೆಳೆದಿದ್ದಾರೆ ಎಂದು ಹೇಳಿದರು
500 ವರ್ಷಗಳ ಹಿಂದೆ ವಿವಿಧ ರೀತಿಯ ಪಾಡ್ದನ ಗಳು ಬಂದಿದ್ದರೂ ಅಬ್ಬಕ ರಾಣಿ ಹೆಸರಿನಲ್ಲಿ ಯಾಕೆ ಪಾಡ್ದನ ಬಂದಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಉಳಿದಿದೆ.1544ರಿಂದ1572 ವರೆಗೆ ಅಬ್ಬಕ ರಾಣಿ ಆಡಳಿತ ಇತ್ತು. ಈ ವೇಳೆ ವಿಜಯ ನಗರ ಸಾಮ್ರಾಜ್ಯ ಇತ್ತು. ಹಿರಿಯ, ಕಿರಿಯ ಎಂಬಿಬ್ಬರು ಅಬ್ಬಕ ರಾಣಿ ಗಳಿದ್ದರು. ಇವರು ಹೊರಾಡಿದ್ದು ಪೋರ್ಚುಗೀಸ್,ಡಚ್ಚರ ವಿರುದ್ಧ ಆಗಿತ್ತು. ಇದರ ಬಳಿಕ ಟಿಪ್ಪು ಸುಲ್ತಾನ್,ಹೈದರಾಲಿ ಅವರ ಹೋರಾಟ ನಡೆದಿದ್ದರೂ ನಿಜವಾದ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡಿದ್ದು 1857 ರಲ್ಲಾಗಿದೆ ಎಂದು ಹೇಳಿದರು.
ಆದರೆ ಅಬ್ಬಕ್ಕಳ ಕಾಲಾವಧಿ ಯಲ್ಲಿ ಅವರವರ ಸಾಮ್ರಾಜ್ಯ ಕಾಪಾಡುವುದು ಗುರಿಯಾಗಿತ್ತು. ಉಳ್ಳಾಲ ಭಾಗದಲ್ಲಿ ಸಾಮ್ರಾಜ್ಯ ಉಳಿಸಲು ಅಬ್ಬಕ್ಕಳ ಪಾತ್ರ ಮಹತ್ವವಾಗಿತ್ತು. 1498 ರಲ್ಲಿ ವಾಸ್ಕೋಡಿಗಾಮ ವ್ಯಾಪಾರ ದ ದೃಷ್ಟಿಯಿಂದ ದೇಶಕ್ಕೆ ಬಂದಿದ್ದರು.ಅವರು ಗೋವಾ, ಮಹಾರಾಷ್ಟ್ರ ತೆರಳಿ ಬಳಿಕ ಮಂಗಳೂರಿಗೆ ಬಂದ ಪೊರ್ಚುಗೀಸರು ಇಲ್ಲಿನ ಬೆಳೆಗಳನ್ನು ಕಡಿಮೆ ದರಕ್ಕೆ ಖರೀದಿಸಿ ವಿದೇಶಕ್ಕೆ ಮಾರಾಟ ಮಾಡಲಾರಭಿಸಿದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿರೋಧ ತೋರಿದ್ದು ರಾಣಿ ಅಬ್ಬಕ್ಕ ಆಗಿದ್ದಾರೆ ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಸಂಪ್ರದಾಯ ಸಂಸ್ಕೃತಿ ಬದಲಾಗುತ್ತಿದೆ. ನಮಗೆ ಏಕ ಸಂಸ್ಕೃತಿ, ಪದ್ಧತಿ ಬೇಡ. ಹಿಂದಿನ ಕಾಲದಲ್ಲಿ ಬಂದ ಬಹುಸಂಸ್ಕೃತಿ, ಸಂಪ್ರದಾಯ ಬೇಕಾಗಿದೆ ಎಂದು ಹೇಳಿದರು
ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಕೃಷ್ಣಪ್ಪ ಕೊಂಚಾಡಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ತಾಲೂಕು ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಬಬ್ಬುಕಟ್ಟೆ, ಜಿ.ಪಂ.ಮಾಜಿ ಸದಸ್ಯ ಪದ್ಮಾವತಿ ಶೆಟ್ಟಿ, ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮುನ್ನೂರು ಗ್ರಾ.ಪಂ.ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಸುನಿಲ್ ಕುಮಾರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.







