ಗುತ್ತಿಗಾರಿನಲ್ಲಿ ಸ್ಕೂಟಿ- ಬಸ್ ನಡುವೆ ಅಪಘಾತ; ಸ್ಕೂಟಿ ಸವಾರ ಮೃತ್ಯು

ಸುಳ್ಯ : ಸ್ಕೂಟಿಯೊಂದಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟಿರುವ ಘಟನೆ ಗುತ್ತಿಗಾರು ಸಮೀಪದ ಬಾಕಿಲದಲ್ಲಿ ರವಿವಾರ ನಡೆದಿದೆ.
ಮೈಸೂರಿನಿಂದ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸ್ ಬಾಕಿಲ ತಿರುವಿನಲ್ಲಿ ನಾಲ್ಕೂರಿನ ಶಿವರಾಮ (55) ಎಂಬವರು ಚಲಾಯಿಸುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಸ್ಕೂಟಿ ಸವಾರ ಶಿವರಾಮರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜೊತೆಯಲ್ಲಿದ್ದ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





