ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆ: ಶಕ್ತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಉನ್ನತ ಸಾಧನೆ

ಮಂಗಳೂರು: ಮಂಗಳೂರು ಶಕ್ತಿ ನಗರದ ಶಕ್ತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಜೆಇಮೈನ್ಸ್ (JEE Mains) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಶಕ್ತಿ ಶಿಕ್ಷಣ ಸಂಸ್ಥೆಯ 6 ವಿದ್ಯಾರ್ಥಿಗಳು ಶೇಕಡಾ ಶೇ ೮೫ ಕ್ಕಿಂತ ಹೆಚ್ಚು ಅಂಕಗಳಿಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಮೋಘ ಸಾಧನೆ ಮಾಡಿದ್ದಾರೆ.
ಭಾರತದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NIT’S)ಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಕಲಿಯುವ ರೋಹಿತ್ ಕಲ್ಲುರಾಯ ಶೇಕಡಾ 99.82 ಅಂಕಗಳಿಸಿದ್ದಾರೆ. ಕ್ರಮವಾಗಿ ಪ್ರತೀಕ್ಷಾ ಬಿ.ಪಿ. ಶೇ 96.05 , ಸಚಿನ್ -ಶೇ 92.34, ಹಿತೇಶ್ ಕುಮಾರ್ -ಶೇ 88.32, ಲಿಂಗರಾಜ್ ಆನಂದ್ ಪಾಸ್ಚಾಪುರ್ ಶೇ 88.09, ವೈಭವ್ ಡಿ.ಜೆ.-ಶೇ 87.60 ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತಾಧಿಕಾರಿ ಡಾ.ಕೆ.ಸಿ.ನಾಕ್ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಕ್ ಶುಭ ಹಾರೈಸಿದ್ದಾರೆ.
Next Story