ಎಸ್ಕೆಎಸ್ಸೆಸ್ಸೆಫ್ ದ.ಕ. ವೆಸ್ಟ್ ಅಧ್ಯಕ್ಷರಾಗಿ ಸಯ್ಯಿದ್ ಅಮೀರ್ ತಂಙಳ್ ಅಲ್-ಬುಖಾರಿ ಕಿನ್ಯ ಆಯ್ಕೆ

ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ಸಮಿತಿಯ ಸಭೆಯು ಆಲಡ್ಕದ ಎಸ್.ಎಸ್. ಸಭಾಭವನದಲ್ಲಿ ಮಂಗಳವಾರ ನಡೆಯಿತು.
2024-26ರ ಸಾಲಿನ ನೂತನ ಅಧ್ಯಕ್ಷರಾಗಿ ಸಯ್ಯಿದ್ ಅಮೀರ್ ತಂಙಳ್ ಅಲ್-ಬುಖಾರಿ ಕಿನ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮಲಿಕ್, ಫಾರುಖ್ ದಾರಿಮಿ, ಹಕೀಂ ಪರ್ತಿಪ್ಪಾಡಿ, ಹಾರಿಸ್ ಕುದ್ರೋಳಿ, ಆಸಿಫ್ ಅಬ್ದುಲ್ಲಾ ಉಳ್ಳಾಲ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಅಬುಸ್ವಾಲಿಹ್ ಫೈಝಿ ಅಕ್ಕರಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಆರಿಫ್ ಕಮ್ಮಾಜೆ, ಮುಸ್ತಫಾ ಕಟ್ಟದಪಡ್ಪು, ಉವೈಸ್ ಮದನಿ ತೋಕೆ ಆಯ್ಕೆಯಾದರು.
ಕೋಶಾಧಿಕಾರಿಯಾಗಿ ಅಶ್ರಫ್ ಮರೋಡಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ, ಸಂಘಟನಾ ಕಾರ್ಯದರ್ಶಿಗಳಾಗಿ ಶಾಹುಲ್ ಸೂರಿಂಜೆ, ಇರ್ಫಾನ್ ಮುಸ್ಲಿಯಾರ್, ನಿಝಾರ್ ಅಹ್ಮದ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ತ್ವಲಬಾ ವಿಂಗ್ ಚಯರ್ಮಾನ್ ಆಗಿ ಸೈಯಿದ್ ಬಾಸಿತ್ ಬಾಅಲವಿ ಅಲ್ ಅನ್ಸಾರಿ ಕುಕ್ಕಾಜೆ, ವಿಖಾಯ ಚಯರ್ಮಾನ್ ಆಗಿ ಇಬ್ರಾಹಿಂ ಕುಕ್ಕಟ್ಟೆ, ಸಹಚಾರಿ ಚಯರ್ಮಾನ್ ಮುಖ್ಯಸ್ಥರಾಗಿ ನಝೀರ್ ವಳಚ್ಚಿಲ್, ಸರ್ಗಲಯ ಚಯರ್ಮಾನ್ ಆಗಿ ಅಶ್ರಫ್ ಫೈಝಿ ಕೆ.ಎಂ., ಓರ್ಗಾನೆಟ್ ಚಯರ್ಮಾನ್ ಆಗಿ ಶಾಕಿರ್ ಮಿತ್ತಬೈಲ್, ಇಬಾದ್ ಚಯರ್ಮಾನ್ ಆಗಿ ಅಲ್ತಾಫ್ ಮುಸ್ಲಿಯಾರ್, ಟ್ರೆಂಡ್ ಚಯರ್ಮಾನ್ ಆಗಿ ಮುಹಮ್ಮದ್ ಶಾಫೀ, ಕ್ಯಾಂಪಸ್ ವಿಂಗ್ ಚಯರ್ಮಾನ್ ಆಗಿ ಉವೈಸ್ ಬಾಂಬಿಲ, ಸಿ ಎಚ್ ಇಬ್ರಾಹಿಂ ಮುಸ್ಲಿಯಾರ್, ಮುನೀರ್ ಅಬ್ದುಲ್ ಖಾದರ್ ಮೊದಲಾದವತು ಆಯ್ಕೆಯಾದರು.







