ಹಳೆಕೋಟೆ: ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಮಂಗಳೂರು: ಮಕ್ಕಳ ಬೆಳವಣಿಗೆಯಲ್ಲಿ ಸ್ಮಾರ್ಟ್ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಹಳೆಕೋಟೆ ಶಾಲೆ ಆಂಗ್ಲ ಮಾಧ್ಯಮಕ್ಕೂ ಮಿಗಿಲಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಅಭಿಪ್ರಾಯಪಟ್ಟರು.
ಅವರು ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಹಳೆಕೋಟೆಯಲ್ಲಿರುವ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲಸ ಮಾಡುವ ಸಂಸ್ಥೆ, ಕಲಿಯುವ ಮಕ್ಕಳ ಶಿಕ್ಷಣ ಸವಲತ್ತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಶಿಕ್ಷಕರು ಸಮುದಾಯಕ್ಕೆ ಆಸ್ತಿ, ಅಂತ ಕಾರ್ಯ ಹಳೆಕೋಟೆ ಶಾಲಾ ಮುಖ್ಯಶಿಕ್ಷಕರು ಮಾಡುತ್ತಿರುವುದು ಶ್ಲಾಘನೀಯ ಎಂದರು.
ತಹಸೀಲ್ದಾರ್ ಪುಟ್ಟರಾಜು, ದರ್ಗಾ ಆಡಳಿತ ಸಮಿತಿ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಸದಸ್ಯರಾದ ಫಾರೂಕ್ ಯು.ಎಚ್., ಯು.ಡಿ.ಅಶ್ರಫ್, ಪಾಂಡ್ಯರಾಜ್ ಬಳ್ಳಾಲ್ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ, ಹಳೆಕೋಟೆ ಶಾಲಾ ಉಪಾಧ್ಯಕ್ಷ ಯು.ಎಚ್.ಇಬ್ರಾಹಿಂ, ಝೈನುದ್ದೀನ್, ಅನುದಾನಿತ ಶಾಲಾ ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಜಯವಂತಿ ಸೋನ್ಸ್, ಸೆಲ್ಕೋ ಸೋಲಾರ್ ಮಂಗಳೂರು ವ್ಯವಸ್ಥಾಪಕ ರವೀಣಾ ಬೋಳಿಯಾರ್, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಫೀಕ್ ಹಳೆಕೋಟೆ, ಅಕ್ಕಕೆರೆ ಫ್ರೆಂಡ್ಸ್ ಅಧ್ಯಕ್ಷ ಅಝೀಝ್, ಅಲ್ತಾಫ್ ಹಳೆಕೋಟೆ ಮೊದಲಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.







