ಡಿವೈಎಫ್‌ಐ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ಮಂಗಳೂರು, ಫೆ.18: ಉದ್ಯೋಗ, ಸಾಮರಸ್ಯ, ಘನತೆಯ ಬದುಕಿಗಾಗಿ ಫೆ.25,26,27ರಂದು ತೊಕ್ಕೊಟ್ಟಿನಲ್ಲಿ ನಡೆಯಲಿ ರುವ ಡಿವೈಎಫ್‌ಐ 12ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಚೇರಿಯನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಸಿಪಿಎಂ ಹಿರಿಯ ನಾಯಕ ಕೃಷ್ಣಪ್ಪ ಸಾಲ್ಯಾನ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕೋಮು ಸಾಮರಸ್ಯಕ್ಕೆ ಹೆಸರಾದ ಜಿಲ್ಲೆಯಲ್ಲಿ ಸಾಮರಸ್ಯತೆ ಉಳಿದಿಲ್ಲ. ಯುವಜನರು, ವಿದ್ಯಾರ್ಥಿಗಳ ನಡುವೆ ದ್ವೇಷದ ಭಾವನೆ ಹಂಚಲಾಗುತ್ತಿದೆ, ಅದನ್ನು ಸರಿದಾರಿಗೆ ತರಬೇಕಾದ ಜನಪ್ರತಿನಿಧಿಗಳು ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ. ಇಂತಹ ಅಪಾಯಕಾರಿ ಬೆಳವಣೆಗೆಗಳಿಂದ ಜಿಲ್ಲೆಯ ಯುವಜನರನ್ನು ಹೊರತಂದು ಅವರ ಬದುಕಿನ ಪ್ರಶ್ನೆಯ ಬಗ್ಗೆ ಜಾಗೃತರನ್ನಾಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಡಿವೈಎಫ್‌ಐ ರಾಜ್ಯ ಸಮ್ಮೇಳನವು ಉದ್ಯೋಗ, ಸಾಮರಸ್ಯ, ಘನತೆಯ ಬದುಕಿಗಾಗಿ ಎಂಬ ಘೋಷಣೆಯಡಿ ಸಂಘಟಿಸಲಾಗಿದೆ ಎಂದರು.
ಈ ಸಂದರ್ಭ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಮುಖಂಡ ರಾದ ಡಾ.ಜೀವನ್‌ರಾಜ್ ಕುತ್ತಾರ್, ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ರಿಝ್ವಾನ್ ಹರೇಕಳ, ಮುನ್ನೂರು ಗ್ರಾಪಂ ಉಪಾಧ್ಯಕ್ಷ ಮಹಾಬಲ ದೆಪ್ಪೆಲಿಮಾರ್, ಹರೇಕಳ ಗ್ರಾಪಂ ಸದಸ್ಯ ಅಶ್ರಫ್ ಹರೇಕಳ, ಧೀರಜ್ ಬಜಾಲ್, ವಕೀಲ ರಾಮಚಂದ್ರ ಬಬ್ಬುಕಟ್ಟೆ, ರಿಯಾಝ್ ಮದಕ, ಅನಿಲ್ ತಿಲಕ್‌ನಗರ, ಯೋಗಿತ ಉಳ್ಳಾಲ, ಅಸುಂತ, ಪ್ರಮೀಳ ದೇವಾಡಿಗ ಉಪಸ್ಥಿತರಿದ್ದರು.







