ಬಂಟ್ವಾಳ: ಮುಸ್ಲಿಂ ಸಮಾಜದ ಅಧ್ಯಕ್ಷರಾಗಿ ಕೆ.ಎಚ್. ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಖಾನ್ ಆಯ್ಕೆ

ಕೆ.ಎಚ್. ಅಬೂಬಕ್ಕರ್- ಹನೀಫ್ ಖಾನ್
ಬಂಟ್ವಾಳ: ಮುಸ್ಲಿಂ ಸಮಾಜ ಬಂಟ್ವಾಳ ಇದರ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್, ಗೌರವ ಸಲಹೆಗಾರ ಎಂ.ಎಸ್. ಮುಹಮ್ಮದ್ ರವರ ನೇತೃತ್ವದಲ್ಲಿ ಪಾಣೆಮಂಗಳೂರಿನ ಆಲಡ್ಕದಲ್ಲಿರುವ ಎಸ್. ಎಸ್. ಹಾಲ್ ನಲ್ಲಿ ನಡೆಯಿತು.
ಸಭೆಯನ್ನು ಮುಸ್ತಫ ಬೋಲಂಗಡಿಯವರ ಕಿರಾಅತ್ ಪಠಣೆಯೊಂದಿಗೆ ಪ್ರಾರಂಭಿಸಲಾಯಿತು. ಸ್ವಾಗತದೊಂದಿಗೆ ಗಥಾವರ್ಷದ ವರದಿಯನ್ನು ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅವರು ವಾಚಿಸಿದರು.
ಅಧ್ಯಕ್ಷರಾಗಿದ್ದ ಅಬ್ಬಾಸ್ ಅವರು ಸಂಘಟನೆಯು ನಡೆದು ಬಂದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು, ಸಂಘಟನೆ ಮತ್ತು ಐಕ್ಯತೆಯ ಬಗ್ಗೆ ಹನೀಫ್ ಖಾನ್ ರವರ ತರಗತಿಯೊಂದಿಗೆ, ಕಾರ್ಯ ಚಟುವಟಿಕೆಯ ಬಗ್ಗೆ ಸರ್ವ ಸದಸ್ಯರೊಂದಿಗೆ ಅಭಿಪ್ರಾಯ ಸಂಗ್ರಹಿಸಲಾಯಿತು.
ಎಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಮುಂದೆ ಸಂಘಟನೆಯ ಕಾರ್ಯಚಟುವಟಿಕೆಗಳ ಅವಶ್ಯಕತೆಯ ಬಗ್ಗೆ, M.S. ಮೊಹಮ್ಮದ್ ರವರು ಸವಿಸ್ತಾರವಾಗಿ ತಿಳಿಸಿದರು.
ನಂತರ ಮುಂದಿನ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ರವರ ಸಮಾರೋಪ ಭಾಷಣದೊಂದಿಗೆ ಮುಕ್ತಾಯಗೊಳಿಸಲಾಯಿತು.
ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ, K.H. ಅಬೂಬಕ್ಕರ್, ಉಪಾಧ್ಯಕ್ಷರಾಗಿ ಅಬ್ಬಾಸ್ ಸುನೈನಾ ಮತ್ತು ಅಬ್ಬಾಸ್ ಅಲಿ, ಪ್ರಧಾನ ಕಾರ್ಯದರ್ಶಿಗಳಾಗಿ. ಹನೀಫ್ ಖಾನ್, ಕಾರ್ಯದರ್ಶಿಗಳಾಗಿ. ಯಾಸಿರ್ ಕೆ. ಎಸ್. ಮತ್ತು ಮುಸ್ತಫ ಬೋಳಂಗಡಿ.
ಕೋಶಾಧಿಕಾರಿಯಾಗಿ D.K. ಇಬ್ರಾಹಿಂ, ಸಂಘಟನಾ ಕಾರ್ಯದರ್ಶಿಯಾಗಿ ಶಾಹುಲ್ S.H, ಪತ್ರಿಕಾ ಕಾರ್ಯದರ್ಶಿಯಾಗಿ. ಮುಸ್ತಾಕ್ ತಲಪಾಡಿ, ಕಾನೂನು ಕಾರ್ಯದರ್ಶಿಯಾಗಿ ಇಕ್ಬಾಲ್ ಗೂಡಿನ ಬಳಿ, ಸಾಮಾಜಿಕ ಜಾಲತಾಣದ ಉಸ್ತುವಾರಿಗಳಾಗಿ, ಇರ್ಷಾದ್ ಮೆಲ್ಕರ್, ಝೈನುಲ್ ಅಕ್ಬರ್ ಕಡೆ ಶಿವಾಲಯ, ಸಲೀಂ ಅಲಂಪಾಡಿ, ವಕ್ತಾರರಾಗಿ ಸೈನರ್ ಕುಕ್ಕಾಜೆ ಆಯ್ಕೆಯಾಗಿರುತ್ತಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಬ್ಬಾರ್ ಪಲ್ಲಮಜಲು, ಶಾವುಲ್ S.P, ಇಕ್ಬಾಲ್ A.K, ಇಕ್ಬಾಲ್ ಅಕ್ಕರಂಗಡಿ, ಮುಹಮ್ಮದ್ ಹಾಜಿ, S.K. ಮುಹಮ್ಮದ್ ಸಜಿಪ, ರಝಾಕ್ ಬಾಂಬಿಲ, ಸಾಲಿ ಮಲ್ಲರಪಟ್ಟಣ, ಇಬ್ರಾಹಿಂ ಕೈಲಾರ್ ಆಯ್ಕೆಯಾದರು.







