Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉಪ್ಪಿನಂಗಡಿ: ಸೌಜನ್ಯ ಸಾವಿಗೆ ನ್ಯಾಯ...

ಉಪ್ಪಿನಂಗಡಿ: ಸೌಜನ್ಯ ಸಾವಿಗೆ ನ್ಯಾಯ ಬಯಸಿ ಜನಾಂದೋಲನ

ವಾರ್ತಾಭಾರತಿವಾರ್ತಾಭಾರತಿ18 Feb 2024 10:07 PM IST
share
ಉಪ್ಪಿನಂಗಡಿ: ಸೌಜನ್ಯ ಸಾವಿಗೆ ನ್ಯಾಯ ಬಯಸಿ ಜನಾಂದೋಲನ

ಉಪ್ಪಿನಂಗಡಿ: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಲ್ಪಟ್ಟ ಸೌಜನ್ಯ ಬರೇ ಹೆಣ್ಣಲ್ಲ. ಅವಳೀಗ ದೇವಿ ಸ್ವರೂಪಿಣಿಯಾಗಿದ್ದಾಳೆ. ಅವಳ ಹಾಗೂ ದೈವ ದೇವರುಗಳ ಶಕ್ತಿ ನಮಗಿದ್ದು, ಅವಳನ್ನು ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳ ಅಂತ್ಯದ ಶಕ್ತಿಗಳು ನಾವಾಗಲಿದ್ದೇವೆ. ನಮ್ಮ ಹೋರಾಟಕ್ಕೆ ಗೆಲುವು ನಿಶ್ಚಿತ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಪ್ರಜಾಪ್ರಭುತ್ವ ವೇದಿಕೆ ಮತ್ತು ಸೌಜನ್ಯ ಹೋರಾಟ ಸಮಿತಿ ಉಪ್ಪಿನಂಗಡಿಯ ಸಂಯುಕ್ತಾಶ್ರಯದಲ್ಲಿ ಫೆ.18ರಂದು ಉಪ್ಪಿನಂಗಡಿಯ ಎಚ್.ಎಂ. ಹಾಲ್‍ನ ವಠಾರದಲ್ಲಿ ನಡೆದ ಬೃಹತ್ ಜನಾಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೌಜನ್ಯಳ ಸಾವಿಗೆ ನ್ಯಾಯ ತೆಗಿಸಿಕೊಡಬೇಕು. ಅವಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂಬ ನಿಟ್ಟಿನಲ್ಲಿ ಕಳೆದ 12 ವರ್ಷದಿಂದ ನಾವು ಹೋರಾಟ ನಡೆಸುತ್ತಿದ್ದೇವೆ. ಹೋರಾಟವನ್ನು ಹತ್ತಿಕ್ಕುವ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ಆದರೆ ನಮ್ಮ ಹೋರಾಟವನ್ನು ಇನ್ನೂ ಕೆಲವರು ಅದನ್ನು ಅರ್ಥ ಮಾಡಿಕೊಂಡಿಲ್ಲ. ಹೆಣ್ಣು ಮಗಳಿಗೆ ನ್ಯಾಯ ತೆಗಿಸಿಕೊಡಲು ಮನಸ್ಸಿಲ್ಲದವರಿಗೆ ಈ ಮಣ್ಣಿನಲ್ಲಿ ಬದುಕಲೂ ಬಾರದು. ಧರ್ಮಸ್ಥಳದಲ್ಲಿ ಏನೇನು ಅತ್ಯಾಚಾರ, ಅನಾಚಾರಗಳು ನಡೆದಿವೆಯೋ ಅವೆಲ್ಲಾ ರಾಜಕಾರಣಿಗಳಿಗೆ ಗೊತ್ತಿದೆ. ಇಲ್ಲಿನ ಕೆಟ್ಟ ಕೆಲಸಗಳಿಗೆ ಬೆಂಬಲವಾಗಿ ನಿಂತ ರಾಜಕಾರಣಿಗಳಿಗೆ, ಅಧಿಕಾರಿ ವರ್ಗದವರಿಗೆಲ್ಲಾ ಮುಂದಿನ ದಿನಗಳಲ್ಲಿ ಮಾರಿ ಹಬ್ಬ ಇದೆ. ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪನ ಮತ್ತು ಸೌಜನ್ಯವೆಂಬ ದೇವಿ ಸ್ವರೂಪಿಣಿಯ ಶಕ್ತಿಗಳು ನಮಗೆ ಬೆಂಬಲವಾಗಿದ್ದು, ಆದ್ದರಿಂದ ಈ ಬಾರಿ ಸಾಕ್ಷ್ಯ ನಾಶ ಪಡಿಸೋಕು ಯಾರಿಂದಲೂ ಸಾಧ್ಯವಿಲ್ಲ. ಹೋರಾಟಗಾರರ ಕೂದಲನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಗೆಲುವು ನಿಶ್ಚಿತವಾಗಿದ್ದು, ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದೆಹಲಿಯಲ್ಲಿಯೂ ಪ್ರತಿಭಟನೆ ಮಾಡುತ್ತೇವೆ ಎಂದರು.

ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಮಾತನಾಡಿ, ಹಿಂದೆ ನಡೆದ ದೌರ್ಜನ್ಯ, ದಬ್ಬಾಳಿಕೆಯ ಕನ್ನಡಿಯೇ ಸೌಜನ್ಯ ಪ್ರಕರಣವಾಗಿದ್ದು, ಅಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಿದೆ. ಇನ್ನು ಒಂದು ತಿಂಗಳು ಕಾಯಿರಿ. ಧರ್ಮಸ್ಥಳಕ್ಕೆ ಬಂದು ಅಲ್ಲಿ ಏನೇನು ನಡೆದಿದೆ ಎಂಬುದನ್ನು ನಾವು ತೋರಿಸ್ತೇವೆ. ರಾಜ್ಯದ ಜನತೆಯೂ ಧರ್ಮಸ್ಥಳಕ್ಕೆ ಬರಬೇಕು. ನ್ಯಾಯಕ್ಕಾಗಿ ನಮ್ಮದು ಶಾಂತಿಯುತ ಹೋರಾಟವಾಗಿದ್ದು, ನ್ಯಾಯ ಸಿಗದಿದ್ದಲ್ಲಿ ದಂಗೆಯೂ ಅನಿವಾರ್ಯವಾಗಲಿದೆ. ನಮ್ಮನ್ನು ಜೈಲಿಗೆ ಹಾಕಿದರೂ ಚಿಂತಿಲ್ಲ. ಅಲ್ಲಿಯೂ ಸೌಜನ್ಯ ಪರ ಹೋರಾಟ ಸಮಿತಿ ಸ್ಥಾಪಿಸಿ ಹೋರಾಟ ನಡೆಸುತ್ತೇವೆ ಎಂದು ಸವಾಲು ಹಾಕಿದರು ಹಾಗೂ ಅಲ್ಲಿ ನಡೆದಿರುವ ಹಿಂದೂ ಹೆಣ್ಮಕ್ಕಳ ಅತ್ಯಾಚಾರ, ಸಾವಿನ ಬಗ್ಗೆ ರಾಜಕಾರಣಿಗಳು ಮಾತ್ರ ಧ್ವನಿಯೆತ್ತುತ್ತಿಲ್ಲ. ರಾಮ ನಾಮ ಜಪ ಮಾಡೋದು ಮಾತ್ರ ಹಿಂದುತ್ವನಾ ಎಂದು ಪ್ರಶ್ನಿಸಿದರು.

ತುಳು ಜನಪದ ವಾಗ್ಮಿ ತಮ್ಮಣ್ಣ ಶೆಟ್ಟಿ ಮಾತನಾಡಿ, ಉಪ್ಪಿನಂಗಡಿಯೆಂಬುದು ಸಾಮರಸ್ಯದ ಮಣ್ಣಾಗಿದ್ದು, ಧರ್ಮಸ್ಥಳದಲ್ಲಿ ನಡೆದಿರುವಂತಹ ಅನ್ಯಾಯ- ಅನಾಚಾರಗಳಿಗೆ ನ್ಯಾಯ ಕೇಳಲು ನಾವು ಇಲ್ಲಿ ಬಂದಿದ್ದೇವೆ. ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ ಧ್ವನಿಯೆತ್ತದವರು ಎಂದೆಂದಿಗೂ ನಮ್ಮ ಶತ್ರುಗಳಾಗಿದ್ದಾರೆ. ಧರ್ಮಸ್ಥಳವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಮೊದಲು ಅತ್ಯಾಚಾರ, ಅನ್ಯಾಯ, ಬಡ್ಡಿ ಮುಕ್ತ ಧರ್ಮಸ್ಥಳವನ್ನಾಗಿ ಮಾಡಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಹಿಂದೂ ಹಿಂದೂ ಎಂದು ಬೊಬ್ಬಿಡುವ ರಾಜಕಾರಣಿಗಳು ಸೌಜನ್ಯಳ ಪ್ರಕರಣದ ಬಗ್ಗೆ ಧ್ವನಿಯೆತ್ತುತ್ತಿಲ್ಲ. ಶಾಸಕರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತೆಂದು ಸದನದಲ್ಲಿ ಬೊಬ್ಬಿಡುವ ಶಾಸಕರುಗಳಿಗೆ ಸದನದಲ್ಲಿ ಚರ್ಚೆ ಮಾಡಿ ಅನ್ಯಾಯಕ್ಕೊಳಗಾದ ಹಿಂದೂ ಹೆಣ್ಮಗಳಿಗೆ ನ್ಯಾಯ ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ನಡೆಗಳಿಂದಾಗಿ ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೆ ವಿಶ್ವಾಸ ಹೋಗುವಂತಾಗಿದೆ. ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಎಲ್ಲರೂ ಮನೆಯಲ್ಲಿ ಪ್ರಾರ್ಥನೆ ಮಾಡಿ. ನಮ್ಮ ತಾಳ್ಮೆಗೂ ಮಿತಿಯಿದ್ದು, ಅನ್ಯಾಯದ ವಿರುದ್ಧ ಹೋರಾಟಕ್ಕೆ ದೊಣ್ಣೆ ಹಿಡಿಯಲು ನಾವು ರೆಡಿ ಇರಬೇಕಾಗಿದೆ ಎಂದರು.

ಸೌಜನ್ಯಳ ತಾಯಿ ಶ್ರೀಮತಿ ಕುಸುಮಾವತಿ ಮಾತನಾಡಿ, ಧರ್ಮಸ್ಥಳದಲ್ಲಿ ಎಷ್ಟೋ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದು ಹಾಕಲಾಗಿದೆ. ಸತ್ತಿರುವ ಇವರಿಗಾಗಿ ನಾನಿಂದು ಬದುಕಿದ್ದೇನೆ. ಅವರಿಗಾಗಿ ನ್ಯಾಯ ಬೇಡುತ್ತಿದ್ದೇನೆ ಎಂದು ಕಣ್ಣೀರಿಟ್ಟರು.

ಹೋರಾಟಗಾರ ವಿಷ್ಣುಮೂರ್ತಿ ಭಟ್ ಮಾತನಾಡಿ, ಬಡವರ ಮಕ್ಕಳ ಮೇಲಾಗುತ್ತಿರುವ ಅನ್ಯಾಯ- ಅನಾಚಾರಗಳನ್ನು ನೋಡಿದಾಗ 1947ರ ಸ್ವಾತಂತ್ರ್ಯ ಯಾರಿಗೆ ಬಂದಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸೌಜ್ಯನಳ ಸಾವಿಗೆ ನ್ಯಾಯ ಕೊಡಿ ಸಲು ಯಾವುದೇ ರಾಜಕಾರಣಿಗಳು ಮುಂದಾಗುತ್ತಿಲ್ಲ. ಈ ಹೋರಾಟವನ್ನು ಮನೆ-ಮನೆಗೆ ಮುಟ್ಟಿಸುವ ಕೆಲಸ ವಾಗಬೇಕಿದೆ ಎಂದರು.

ಉಪ್ಪಿನಂಗಡಿ ಸೌಜನ್ಯ ಹೋರಾಟ ಸಮಿತಿಯ ಅಧ್ಯಕ್ಷ ಚಿದಾನಂದ ಪಂಚೇರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನೀತಿ ತಂಡದ ಜಯಂತ್ ಟಿ., ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಅನಿಲ್ ಅಂತರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ಸಂಚಾಲಕ ಕಿರಣ್ ಗೌಂಡತ್ತಿಗೆ, ಪ್ರಮುಖರಾದ ಸಂದೀಪ್ ಕುಪ್ಪೆಟ್ಟಿ, ನಿಶ್ಚಿತ್ ಮಳಲಿ, ಶೈಲಜಾ, ನವೀನ್ ಬಂಡಾಡಿ, ಪ್ರವೀಣ್ ನೆಡ್ಚಿಲ್, ಮೋಹನ್ ಶೆಟ್ಟಿ ಕಜೆಕ್ಕಾರು, ಸುಜಿತ್ ಬೊಳ್ಳಾವು, ರಕ್ಷಿತ್ ಕಜೆಕ್ಕಾರು, ಹರಿಪ್ರಸಾದ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ನವೀನ್ ಕುಮಾರ್ ಕಲ್ಯಾಟೆ, ರಾಜೇಶ್ ಕೊಡಂಗೆ, ಲಕ್ಷ್ಮಣ ಗೌಡ ನೆಡ್ಚಿಲ್, ಆನಂದ ರಾಮಕುಂಜ ಸ್ವಾಗತಿಸಿದರು. ಜತೀಂದ್ರ ಶೆಟ್ಟಿ ಅಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್ ಗೌಂಡತ್ತಿಗೆ ವಂದಿಸಿದರು. ಸಂದೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.








share
ವಾರ್ತಾಭಾರತಿ
ವಾರ್ತಾಭಾರತಿ
Next Story
X