ಜೆರೋಸಾ ಶಾಲೆಯ ಶಿಕ್ಷಕಿಯ ಬಗ್ಗೆ ಆಡಿಯೋ ವೈರಲ್ ವಿವಾದ: ಖಾಸಗಿ ಶಾಲೆಯಿಂದ ಶಿಕ್ಷಕಿ ಕವಿತಾ ವಜಾ

ಜೆರೋಸಾ ಶಾಲೆಯ ಎದುರು ಫೆ.12ರಂದು ನಡೆದ ಪ್ರತಿಭಟನೆ (ಫೈಲ್ ಫೋಟೊ)
ಮಂಗಳೂರು: ನಗರದ ಸಂತ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಬಗ್ಗೆ ವಾಯ್ಸ್ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಖಾಸಗಿ ಶಾಲೆಯೊಂದರ ಶಿಕ್ಷಕಿ ಕಾರಣರಾಗಿದ್ದಾರೆಂದು ಆರೋಪ ಕೇಳಿ ಬಂದಿದೆ.
ಈ ಘಟನೆಯ ಬಳಿಕ ಖಾಸಗಿ ಶಾಲೆಯ ಶಿಕ್ಷಕಿ ಕವಿತಾ ಅವರನ್ನು ತಾವು ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಯಿಂದ ‘ನೀವು ಇನ್ನು ಕೆಲಸಕ್ಕೆ ಬರುವುದು ಬೇಡ. ನಿಮ್ಮ ಸೇವೆ ಅಗತ್ಯವಿಲ್ಲವೆಂದು’ ಹೇಳಿ ಶಾಲೆಯ ಆಡಳಿತ ಸಮಿತಿ ಹೊರಕಳಿಸಿದೆ. ನನಗೆ ಅರ್ಧ ಸಂಬಳ ನೀಡಿ ನೀವು ಬರುವುದು ಬೇಡ ಎಂದು ಅಲ್ಲಿನ ಫಾದರ್ ಹೇಳಿದರು. ‘ನಾನಾಗಿ ಸೇವೆಯನ್ನು ಬಿಡುತ್ತಿಲ್ಲವಲ್ಲ’ ಎಂದು ಆಡಳಿತ ಮಂಡಳಿಯ ನಿಲುವಿನ ಬಗ್ಗೆ ಪ್ರಶ್ನಿಸಿದಾಗ ತಿಂಗಳ ಪೂರ್ತಿ ಸಂಬಳ ದೊರೆಯಿತು ಎಂದು ಕವಿತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಕಿ ಕವಿತಾ ತೊಕ್ಕೊಟ್ಟಿನ ಹೋಲಿ ಏಂಜೆಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಇವರ ಮಗಳು ಸಂತ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ.
ಫೆ.15ರಿಂದ ಹೊರದೇಶಗಳಿಂದ ಅನಾಮಿಕ ಕರೆಗಳು ನಿರಂತರ ಬರುತ್ತಿದೆ. ಆದರೆ ಯಾವುದೇ ಕರೆಯನ್ನು ತಾನು ರಿಸೀವ್ ಮಾಡುತ್ತಿಲ್ಲ. ಒಂದು ಕರೆಯನ್ನು ರಾತ್ರಿ ಸ್ವೀಕರಿಸಿದ ಅವರ ಗಂಡನಲ್ಲಿ ‘ಕವಿತಾ ಎಲ್ಲಿದ್ದಾರೆ’ ಏರು ಧ್ವನಿಯಲ್ಲಿ ಕೇಳಿರುವುದಾಗಿ ಕವಿತಾ ತಿಳಿಸಿದ್ದಾರೆ.







