ಕೂಳೂರು -ಕಾವೂರು ಮುಸ್ಲಿಂ ಒಕ್ಕೂಟದ ಮಹಾಸಭೆ

ಮಂಗಳೂರು: ಕೂಳೂರು-ಕಾವೂರು ಮುಸ್ಲಿಂ ಒಕ್ಕೂಟದ ಮಹಾಸಭೆಯು ಪಂಜಿಮೊಗರುವಿನ ಕೆಎಂಜೆಎಂ ಸಮುದಾಯ ಭವನದಲ್ಲಿ ಜರುಗಿತು.
ಕೂಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್‌ನ ಖತೀಬ್ ಇಕ್ರಾಮುಲ್ಲಾ ಸಖಾಫಿ ದುಆಗೈದರು. ಬಶೀರ್ ಮದನಿ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಖಾದರ್ ಹಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಹುಸೈನ್ ರಿಯಾಝ್ ಒಕ್ಕೂಟದ ಕಾರ್ಯ ಯೋಜನೆಯ ಬಗ್ಗೆ ವಿವರಿಸಿದರು.
2024-24ನೇ ಸಾಲಿನ ಸಮಿತಿಯ ನೂತನ ಅಧ್ಯಕ್ಷರಾಗಿ ಹುಸೈನ್ ರಿಯಾಝ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಕೂಳೂರು ಪುನರಾಯ್ಕೆಯಾದರು. ಗೌರವಾಧ್ಯಕ್ಷರಾಗಿ ಶೇಕುಂಞಿ ಹಾಜಿ, ಉಪಾಧ್ಯಕ್ಷರಾಗಿ ಹಕೀಮ್ ಪಂಜಿ ಮೊಗರು ಮತ್ತು ಇಬ್ರಾಹಿಂ ಅತ್ರಬೈಲ್, ಜತೆ ಕಾರ್ಯದರ್ಶಿಯಾಗಿ ಶಕೀಲ್ ಮತ್ತು ರಶೀದ್ ಶಾಂತಿನಗರ, ಕೋಶಾಧಿಕಾರಿ ಯಾಗಿ ಸಿ. ಇಬ್ರಾಹಿಂ ಮರಕಡ ಮತ್ತು ಲೆಕ್ಕ ಪರಿಶೋಧಕರಾಗಿ ಸಿರಾಜ್ ಗಾಂಧಿನಗರ ಆಯ್ಕೆಯಾದರು.
Next Story





