Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್...

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹೃದಯಕ್ಕೆ ಹತ್ತಿರವಾದ ಸಂಸ್ಥೆ: ನಟಿ ಪ್ರಿಯಾಮಣಿ

ಪುತ್ತೂರಿನಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆ ಶುಭಾರಂಭ

ವಾರ್ತಾಭಾರತಿವಾರ್ತಾಭಾರತಿ22 Feb 2024 9:45 PM IST
share
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹೃದಯಕ್ಕೆ ಹತ್ತಿರವಾದ ಸಂಸ್ಥೆ: ನಟಿ ಪ್ರಿಯಾಮಣಿ

ಪುತ್ತೂರು: ಪುತ್ತೂರಿನಲ್ಲಿ ಆರಂಭಗೊಂಡಿರುವ ನೂತನ ಚಿನ್ನಾಭರಣ ಮಳಿಗೆಗೆ ಪ್ರೀತಿಯಿಟ್ಟು ಆಗಮಿಸಿ, ಪ್ರತಿಯೊಬ್ಬರೂ ನೀಡುವ ಪ್ರೋತ್ಸಾಹವನ್ನು ಕಂಡು ಖುಷಿಯನ್ನು ನೀಡುತ್ತಿದೆ. ಸುಲ್ತಾನ್ ಸಂಸ್ಥೆಯು ಗುಣಮಟ್ಟದ ವಿಚಾರದಲ್ಲಿ ಒಳ್ಳೆಯ ಕೆಲಸ ನಿರ್ವಹಿಸಿ ಉತ್ತಮ ಸಂಗ್ರಹವನ್ನು ಹೊಂದಿದೆ. ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹೃದಯಕ್ಕೆ ಹತ್ತಿರವಾದ ಸಂಸ್ಥೆಯಾಗಿದೆ. ನಿಶ್ಚಿತಾರ್ಥದಲ್ಲಿ ಧರಿಸಿದ ಉಂಗುರಗಳನ್ನು ಒಟ್ಟಿಗೆ ಮಾಡಿ ಆರು ವರ್ಷದಿಂದ ಕೈಯಲ್ಲಿ ಧರಿಸಿಕೊಂಡು ಬಂದಿದ್ದು, ಇದು ಸುಲ್ತಾನ್ ನ ಶಕ್ತಿಯಾಗಿದೆ. ಪುತ್ತೂರಿನಲ್ಲಿ ಈಗ 10 ನೇ ಶಾಖೆಯ ಉದ್ಘಾಟನೆಯಾಗಿದ್ದು ಮುಂದೆ 100 ಶಾಖೆಗಳನ್ನು ಹೊಂದುವಂತಾಗಲಿ ಎಂದು ಬಹುಭಾಷಾ ನಟಿ ಪ್ರಿಯಾಮಣಿ ಹೇಳಿದರು.

ಅವರು ಗುರುವಾರ ಪುತ್ತೂರು ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಬಳಿ ತಾಜ್ ಟವರ್ಸ್‍ನಲ್ಲಿ ನೂತನವಾಗಿ ಆರಂಭಿಸ ಲಾದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ 10ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

6 ವರ್ಷಗಳ ಹಿಂದೆ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್‍ನಲ್ಲಿ ಎಂಗೇಜ್‍ಮೆಂಟ್ ರಿಂಗ್ ಖರೀದಿ ಮಾಡಿದ್ದೆ. ಈಗಲೂ ಅದೇ ರಿಂಗನ್ನು ನಾನು ಧರಿಸಿಕೊಂಡಿದ್ದೇನೆ. ಈ ವಿಚಾರವನ್ನು ಇದುವರೆಗೂ ಎಲ್ಲೂ ನಾನು ಹೇಳಿಕೊಂಡಿಲ್ಲ. ಇದೀಗ ಮೊದಲ ಬಾರಿಗೆ ಹೇಳುತ್ತಿದ್ದೇನೆ ಎಂದು ತನ್ನ ಎಂಗೇಜ್‍ಮೆಂಟ್ ರಿಂಗನ್ನು ತೋರಿಸುತ್ತಾ ರಿಂಗ್ ಕಥೆಯನ್ನು ನಟಿ ಪ್ರಿಯಾಮಣಿ ಬಿಚ್ಚಿಟ್ಟರು.

ಟೆಂಪಲ್ ಕಲೆಕ್ಷನ್ ಸಂಗ್ರಹ ಬಿಡುಗಡೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಮುತ್ತನ್ನು ಬೆಳೆದ ಪುತ್ತೂರು ಇಂದು ಚಿನ್ನದ ನಗರಿಯಾಗಿ ಬೆಳೆದಿದೆ. ಇದಕ್ಕೆ ಸುಲ್ತಾನ್ ಇನ್ನೊಂದು ಗರಿಯನ್ನು ಮೂಡಿಸುವ ಕೆಲಸ ಮಾಡಿದೆ. ಪುತ್ತೂರಿನ ಜನರು ಆಭರಣ ಮತ್ತು ಬಟ್ಟೆ ಪ್ರಿಯರಾಗಿದ್ದು, ಇಲ್ಲಿ ಚಿನ್ನದ ಮಳಿಗೆಯನ್ನು ಬೆಳೆಸುವ ಕಾರ್ಯವನ್ನು ಪುತ್ತೂರಿನ ಆಸುಪಾಸಿನ ಜನರು ಮಾಡಿದ್ದಾರೆ. ಜಿಲ್ಲೆಯಲ್ಲಿ ಚಿನ್ನದ ಮಾರುಕಟ್ಟೆ ಕೇಂದ್ರವಾಗಿ ಪುತ್ತೂರು ಬೆಳೆಯುತ್ತಿದೆ. ಕೇರಳದ ಭಾಗದಲ್ಲಿ ಮನೆ ಮಾತಾಗಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಪುತ್ತೂರಿನಲ್ಲಿ ಶಾಖೆಯನ್ನು ತೆರೆಯುವ ಮೂಲಕ ಜನರ ಸೇವೆಗೆ ಮುಂದಾಗಿರುವುದು ಉತ್ತಮ ವಿಚಾರ ಎಂದು ಹೇಳಿದರು.

ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ `ಜೆಮ್ ಸ್ಟೋನ್ ಸಂಗ್ರಹ', ಎಸ್.ಡಿ.ಪಿ.ಐ. ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ `ವಜ್ರಾಭರಣ ಸಂಗ್ರಹ', ಸಾಲ್ಮರ ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಪಿ. ಅಹಮದ್ ಹಾಜಿ ಆಕರ್ಷಣ್ `ಅರೇಬಿಯನ್ ಚಿನ್ನಾಭರಣ ಸಂಗ್ರಹ', ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ್ ಹಾರ್ವಿನ್ `ಆಂಟಿಕ್ ಚಿನ್ನಾಭರಣ ಸಂಗ್ರಹ', ಲಯನ್ಸ್ 317ಡಿ ಅಧ್ಯಕ್ಷೆ ಡಾ. ರಂಜಿತಾ ಎಚ್. ಶೆಟ್ಟಿ ಕಾವು `ಚಿನ್ನಾಭರಣಗಳ ಸಂಗ್ರಹ'ವನ್ನು ಅನಾವರಣಗೊಳಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತೆಕ್ಕಿಲ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಇಬ್ರಾಹಿಂ ಗೋಳಿಕಟ್ಟೆ, ಅಶ್ರಫ್ ಕಲ್ಲೇಗ, ಬಿ.ಎ. ಶಕೂರ್ ಹಾಜಿ, ರಶೀದ್ ವಿಟ್ಲ. ಹನೀಫ್ ಹಾಜಿ ಗೋಳ್ತಮಜಲು, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್‌, ಮಾರುಕಟ್ಟೆ ವ್ಯವಸ್ಥಾಪಕ ಮಹಮ್ಮದ್ ಹಮ್ರಾಝ್ ಉಪಸ್ಥಿತರಿದ್ದರು.

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‍ ನ ವ್ಯವಸ್ಥಾಪಕ ಡಾ. ಅಬ್ದುಲ್ ರಹೂಫ್, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹೀಮ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಎ.ಕೆ.ಉಣ್ಣಿತ್ತಾನ್, ಪುತ್ತೂರು ಬ್ರಾಂಚ್ ಮೆನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಾಹಿಲ್ ಝಹೀರ್ ನಿರೂಪಿಸಿದರು.

ಪುತ್ತೂರು ಮಳಿಗೆ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ 2024 ಮಾರ್ಚ್ 10 ತನಕ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಪ್ರತಿದಿನ ಇಬ್ಬರು ಗ್ರಾಹಕರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದೆ. ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50% ಕಡಿತ. ಡೈಮಂಡ್ ಪ್ರತಿ ಕ್ಯಾರೆಟ್ ಮೇಲೆ ರೂ. 8000/- ರಿಯಾಯಿತಿ. ಬೆಳ್ಳಿ ಆಭರಣಗಳ ತಯಾರಿಕಾ ವೆಚ್ಚದ ಮೇಲೆ 25% ಕಡಿತ. ನಿಮ್ಮ ಹಳೆಯ ಚಿನ್ನದ ವಿನಿಮಿಯದಲ್ಲಿ ಪ್ರತೀ ಗ್ರಾಮಿಗೆ ರೂ 50/- ಹೆಚ್ಚುವರಿಯಾಗಿ ಪಡೆಯಲು ಅವಕಾಶವಿದೆ. ಪುತ್ತೂರು ಮಳಿಗೆ ಸುಮಾರು 10,000 ಚ.ಅಡಿ ವಿಶಾಲವಾಗಿದ್ದು , ಇಲ್ಲಿ ಸುಲ್ತಾನ್‍ನ ಬ್ರಾಂಡ್‍ಗಳಾದ ಪ್ಯೂರ್ ವೇರ್ ಡೈಮಂಡ್ ಕಲೆಕ್ಷನ್, ಅಮೋಕ ಪ್ಲಾಟಿನಂ ಕಲೆಕ್ಷನ್ಸ್, `ಆಕರ್ಷ' ಅನ್ ಕಟ್ ಡೈಮಂಡ್, ಅಮೂಲ್ಯ ಜೆಮ್ ಸ್ಟೋನ್ ಕಲೆಕ್ಷನ್ಸ್, ತಾರಕ ಮಕ್ಕಳ ಆಭರಣಗಳು, ಸಿಎಐಎ ಲೈಟ್ ವೈಟ್ ಆಭರಣಗಳು ಮತ್ತು ನಿತ್ಯೋಪಯೋಗಿ ಆಭರಣಗಳು ಇಲ್ಲಿ ಲಭ್ಯವಿದೆ. ಕನಿಷ್ಠ ತಯಾರಿಕಾ ವೆಚ್ಚ ಇದೆ ಮತ್ತು ವೇಸ್ಟೇಜ್ ವೆಚ್ಚ ಇರುವುದಿಲ್ಲ, ಹಾಗೆಯೇ 11 ತಿಂಗಳ ಮಾಸಿಕ ಕಂತುಗಳ ಯೋಜನೆ ಇಲ್ಲಿ ಲಭ್ಯವಿದೆ. ಪಾವತಿಗಾಗಿ ಮೊಬೈಲ್ ಆಪ್ ಕೂಡ ಇರುತ್ತದೆ.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X