ಉಳ್ಳಾಲದಲ್ಲಿ ವಿಜ್ರಂಭಣೆಯ ಅಬ್ಬಕ್ಕ ಉತ್ಸವ

ಉಳ್ಳಾಲ: ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ 2023-24 ಕಾರ್ಯಕ್ರಮವು ಶನಿವಾರ ನಗರ ಸಭೆ ಮಹಾತ್ಮ ಗಾಂಧಿ ರಂಗ ಮಂದಿರ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಬೆಳಗ್ಗೆ ಮಾಸ್ತಿಕಟ್ಟೆ ಯಿಂದ ಉತ್ಸವದ ವೇದಿಕೆ ವರೆಗೆ ನಡೆದ ಆಕರ್ಷಕ ತುಳುನಾಡ ದಿಬ್ಬಣ ವನ್ನು ಇನ್ಸ್ಪೆಕ್ಟರ್ ಬಾಲಕೃಷ್ಣ ಉದ್ಘಾಟಿಸಿದರು.
ಇದರ ಬಳಿಕ ಸ್ಪೀಕರ್ ಯುಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರ ರಾಣಿ ಅಬ್ಬಕ್ಕ ಉತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ವೀರ ರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಡಾ.ಅಕ್ಷತಾಆದರ್ಶ್ ಜೈನ್ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟಿ ಸರೋಜಿನಿ ಎಸ್ ಶೆಟ್ಟಿ ನೆರವೇರಿಸಿದರು. ಮಾಜಿ ಶಾಸಕ ಕೆ ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಅಧ್ಯಕ್ಷ ಧನಂಜಯ ಕುಂಬ್ಳೆ, ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ, ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕುಮಾರ್ ಸಾಲ್ಯಾನ್, ಚೀರುಂಬ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ಬಕ್ಕ ಉತ್ಸವ ಸಮಿತಿ ಗೌರವಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಯೆನೆಪೋಯ ಕಾಲೇಜು ಉಪ ಪ್ರಾಂಶುಪಾಲ ಡಾ.ಜೀವನ್ ರಾಜ್ ಕುತ್ತಾರ್, ಸೌತ್ ಕೆನರಾ ಫೋಟೋ ಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ಚೆನ್ನಕೇಶವ, ಬ್ಯಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಝೀರ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಕೃಷ್ಣ ಗಟ್ಟಿ, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಉಳ್ಳಾಲ ಇದರ ರಾಜೇಶ್ ಪುತ್ರನ್, ಯೂತ್ ಸ್ಪೋರ್ಟ್ಸ್ ಅಕಾಡೆಮಿಯ ಸಾಜಿದ್ ಉಳ್ಳಾಲ,ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ನ ವೇಣುಗೋಪಾಲ್ ಕೊಲ್ಯ, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹನೀಫ್ ಹಾಜಿ,ಇರಾ ಯುವಕ ಮಂಡಲ, ಆಲ್ವಿನ್ ಡಿಸೋಜ, ಉಮೇಶ್ ಬೋಳಾರ್, ಪ್ರಮೋದ್ ಉಳ್ಳಾಲ,ಇರಾ ನೇಮು ಪೂಜಾರಿ,ಎಂ.ಹೆಚ್.ಮಲಾರ್, ಬದ್ರುದ್ದೀನ್ ಹರೇಕಳ, ಮಂಜುನಾಥ್ ಎಸ್ ರೇವಣ್ ಕರ್,ಶೇಖರ ಪಂಬದ ರವರನ್ನು ಸನ್ಮಾನಿಸಲಾಯಿತು.
ಅಬ್ಬಕ್ಕ ಉತ್ಸವ ಪ್ರಯುಕ್ತ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ , ತುಳು ಹಾಸ್ಯ ಕಾರ್ಯಕ್ರಮ, ಜಾನಪದ ನೃತ್ಯ, ಅಮೃತ ಬಹುಭಾಷಾ ಕಾವ್ಯ ಗಾಯನ ನಡೆಯಿತು.
ಪ್ರೋ ಅಮೃತ ಸೋಮೇಶ್ವರ ಅವರ ಸಂಸ್ಮರಣೆ ಪ್ರಯುಕ್ತ ಪ್ರೊ.ಅಮೃತರ ಬದುಕು- ಬರೆಹ ಎಂಬ ವಿಷಯದ ಕುರಿತು ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ.ಚೆನ್ನಪ್ಪ ಗೌಡರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಗೋಷ್ಠಿ ಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪಾದೆಕಲ್ಲು ವಿಷ್ಣು ಭಟ್,ಸಂತ ಆಗ್ನೇಸ್ ಕಾಲೇಜು ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ ಭಾಗವಹಿಸಿದ್ದರು
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ.ಚೆನ್ನಪ್ಪ ಗೌಡ ಅವರು, ಅಬ್ಬಕ್ಕ ಉತ್ಸವ ಸಮಿತಿ ಕಳೆದ 27 ವರ್ಷ ಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದೆ.ಪ್ರಶಸ್ತಿಗೆ ಆಯ್ಕೆ ಆಗುವವರಿಗೆ ತುಳುನಾಡಿನ ಸಂಬಂಧ ಇರಬೇಕು. ಅದೇ ರೀತಿ ಗುರುತಿಸಿ 25000 ರೂ. ನಗದಿನೊಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ.ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಕ್ರಮ ಮುಂದುವರಿಸಲಿ ಎಂದು ಅಭಿನಂದನಾ ನುಡಿಗಳನ್ನಾಡಿದರು.
ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಮಾತನಾಡಿ, ರಾಣಿ ಅಬ್ಬಕ್ಕ ಬೇರೆ ಬೇರೆ ರಾಜರ ಜೊತೆ ಸಂಪರ್ಕ ಇಟ್ಟುಕೊಂಡು ಪೋರ್ಚುಗೀಸರ ವಿರುದ್ಧ ಅಬ್ಬಕ್ಕ ಪ್ರಭಾವಶಾಲಿಯಾಗಿ ಹೋರಾಟ ಮಾಡಿದ್ದರು.ಅವರ ಹೆಸರಿ ನಲ್ಲಿ ಸಮಿತಿ ರಚಿಸಿ ಇಂತಹ ಕಾರ್ಯಕ್ರಮಗಳು ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ಲೇಖಕಿ ಡಾ.ಪ್ರಮೀಳ ಮಾಧವ್ ಹಾಗೂ ಖ್ಯಾತ ಕ್ರೀಡಾ ಪಟು, ಪದ್ಮಶ್ರೀ ಪುರಸ್ಕೃತ ಡಾ.ಮಾಲತಿ ಕೆ.ಹೊಳ್ಳ ಅವರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೇವಕಿ ಆರ್ ಉಳ್ಳಾಲ ಪ್ರಶಸ್ತಿ ಪತ್ರ ವಾಚಿಸಿದರು. ಮಂಗಳೂರು ವಿವಿ ಉಪಕುಲಪತಿ ಡಾ. ಜಯರಾಜ್ ಅಮೀನ್, ಹಿಂದುಳಿದ ವರ್ಗದ ಆಯೋಗದ ಸದಸ್ಯ ಕೆ.ಟಿ.ಸುವರ್ಣ, ಸೋಮೇಶ್ವರ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಪ್ಪ ಸಾಲಿಯಾನ್, ಪ್ರದೀಪ್ ಕುಮಾರ್ ಕಲ್ಕೂರ,ಚೀರುಂಬ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ, ಚಂದ್ರಹಾಸ್ ಅಡ್ಯಂತಾಯ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಸೀತಾರಾಮ ಬಂಗೇರ ರತ್ನಾವತಿ ಜೆ. ಬೈಕಾಡಿ ಮತ್ತಿತರರು ಉಪಸ್ಥಿತರಿದ್ದರು.
ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿದರು. ಧನಲಕ್ಷ್ಮೀ ಗಟ್ಟಿ, ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಜೆ ಬೈಕಾಡಿ ವಂದಿಸಿದರು.







