ಉರ್ದು ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಸ್ಪೀಕರ್‌ಗೆ ಮನವಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉರ್ದು ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸುವಂತೆ ಉರ್ದು ಶಿಕ್ಷಕರು ರವಿವಾರ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್‌ಗೆ ಮನವಿ ಸಲ್ಲಿಸಿದೆ.
ನಗರದ ಗೆಸ್ಟ್ ಹೌಸ್ ನಲ್ಲಿ ಕೆ.ಎಂ.ಕೆ.ಮಂಜನಾಡಿ ನೇತೃತ್ವದಲ್ಲಿ ಸ್ಪೀಕರ್‌ಯು.ಟಿ. ಖಾದರ್ ಅವರನ್ನು ಭೇಟಿಯಾದ ಶಿಕ್ಷಕರು ಇದೀಗ ಉರ್ದು ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸಮಸ್ಯೆಗಳ ಪರಿಹಾರಕ್ಕೆ ಸರಕಾರವನ್ನು ಆಗ್ರಹಿಸಿದರು.
ದ.ಕ.ಜಿಲ್ಲೆಯಲ್ಲಿ ಉರ್ದು ಪ್ರಥಮ ಭಾಷೆಯಾಗಿರುವ ಕನ್ನಡ ಮಾಧ್ಯಮ ಶಾಲೆಗಳು ನೂರಾರು ವರ್ಷಗಳಿಂದ ಕಾರ್ಯಾ ಚರಿಸುತ್ತದೆ.ಆದರೆ ಇಲ್ಲಿ ಉರ್ದು ಮಾಧ್ಯಮ ಇಲ್ಲ ಉರ್ದು ಭಾಷೆಯನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.ಆದರೆ ಇತ್ತೀಚಿನ ಎರಡು ವರ್ಷಗಳಿಂದ ಸ್ಟ್ಯಾಟ್ಸ್ ತಂತ್ರಾಂಶದಲ್ಲಿ ಉರ್ದು ಪುಸ್ತಕಗಳನ್ನು ಹೆಚ್ಚುವರಿಯಾಗಿ ನಮೂದಿಸುವ ಅವಕಾಶವಿಲ್ಲ, ಉರ್ದು ಪುಸ್ತಕಗಳು ಬೇರೆಲ್ಲೂ ಲಭ್ಯವಿಲ್ಲದೆ ಇರುವುದರಿಂದ ಮಕ್ಕಳಿಗೆ ಉರ್ದು ಶಿಕ್ಷಣ ನೀಡುವುದು ಅಸಾಧ್ಯವಾಗಿದೆ. ಇದಕ್ಕಾಗಿ ಸ್ಟ್ಯಾಟ್ಸ್ ನಲ್ಲಿ ಉರ್ದು ಭಾಷಾ ವಿಷಯಗಳ ಪಠ್ಯ ಪುಸ್ತಕಗಳ ಬೇಡಿಕೆಯನ್ನು ತುಂಬಲು ಅವಕಾಶ ಕಲ್ಪಿಸಿ ಕೊಡುವಂತೆ ಶಿಕ್ಷಕರು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಉರ್ದು ಶಾಲೆಗಳ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಉರ್ದು ಶಿಕ್ಷಕರಿಗೆ ಭಡ್ತಿ ನೀಡಿ ತುಂಬಿಸುವುದು. ದಕ್ಷಿಣ ಕನ್ನ ಜಿಲ್ಲೆಯ ಎಲ್ಲಾ ಉರ್ದು ಶಾಲೆಗಳಲ್ಲಿ ಉರ್ದು ಶಿಕ್ಷಕರ ಹುದ್ದೆಯನ್ನು ಸೃಷ್ಠಿಸಿ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಒಳಗೊಂಡ ಮನವಿಯನ್ನು ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಅವರಿಗೆ ನೀಡಲಾಯಿತು.
ನಿಯೋಗದಲ್ಲಿ ಉರ್ದು ಶಿಕ್ಷಕರ ಸಂಘದ ಉಪಾಧ್ಯಕ್ಷ ಶಾಹಿನ, ಪ್ರಧಾನ ಕಾರ್ಯದರ್ಶಿ ಸಲ್ಮಾ ಶಾ ಬಾನು, ಕೋಶಾಧಿ ಕಾರಿಗಳಾದ ಸಮೀನ ಅಖ್ತರ್,ಸದಸ್ಯರುಗಳಾದ ಅಸ್ಮಾ ಜಬೀನ್, ಗುಲ್ಶನ್ ತಾಂಬೂಲಿ, ನಿಝಹತುನ್ನೀಸ, ಹಸೀನ್ ತಾಜ್, ಇಶ್ರತ್ ಯಾಸ್ಮೀನ್ ಕಾವಳ ಕಟ್ಟೆ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಖಲೀಲ್ ಅಹ್ಮದ್, ವಿದ್ಯಾರ್ಥಿ ರಕ್ಷಕರಾದ ಶರಾಪತ್ ಅಂಜುಂ, ಇಜಾಸ್ ಪಾಶ ಮತ್ತಿತರರು ಉಪಸ್ಥಿತರಿದ್ದರು.







