ಎನ್‌ಐಟಿಕೆ ಸುರತ್ಕಲ್‌ನಲ್ಲಿ ಆವಿಷ್ಕಾರಗಳ ಅನಾವರಣ ಕಾರ್ಯಾಗಾರ

ಮಂಗಳೂರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಯ ಇನ್‌ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) ಆಶ್ರಯದಲ್ಲಿ ಶನಿವಾರ ಸುರತ್ಕಲ್‌ನ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ‘ಅನ್ಲೀಶಿಂಗ್ ಇನ್ನೋವೇಶನ್ಸ್ - ಫಾರ್ ಆ್ಯಂಡ್ ಗ್ರಾಸ್‌ರೂಟ್’ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವು ಈ ನಾವೀನ್ಯತೆಗಳ ಬಗ್ಗೆ ಜಾಗೃತಿಯನ್ನು ಹರಡಲು ಮತ್ತು ಒಳಗೊಳ್ಳುವಿಕೆಗೆ ಗಮನ ನೀಡಲಾಯಿತು.
ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್‌ನ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಹನಿ ಬೀ ನೆಟ್‌ವರ್ಕ್‌ನ ಸಂಸ್ಥಾಪಕ ಪ್ರೊ.ಅನಿಲ್ ಕುಮಾರ್ ಗುಪ್ತಾ ಅವರು ಕಾರ್ಯಾಗಾರದ ಮುಖ್ಯ ಅತಿಥಿ ಮತ್ತು ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಿಐಎಎನ್ (ಗ್ರಾಸ್‌ರೂಟ್ಸ್ ಇನ್ನೋವೇಶನ್ ಆಗ್ಮೆಂಟೇಶನ್ ನೆಟ್‌ವರ್ಕ್)ನ ನಿರ್ದೇಶಕಿ ಪ್ರೊ.ಅನಾಮಿಕಾ ಡೇ ಅವರು ಥೀಮ್ ಸ್ಪೀಕರ್ ಆಗಿದ್ದರು.
ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಸಂಸ್ಥೆಗಳು ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಒಕ್ಕೂಟವನ್ನು ರಚಿಸುವಂತೆ ಉತ್ತೇಜಿಸಿದರು.
ಇನ್‌ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್‌ನ ಪ್ರಭಾರಿ ಪ್ರೊಫೆಸರ್ ಶ್ರೀವಲ್ಸ ಕೊಳತಯಾರ್, ಸಂಸ್ಥೆಗಳು ಮತ್ತು ಮಧ್ಯಸ್ಥಗಾರರ ನಡುವೆ ಸಹಯೋಗ ಮತ್ತು ಸಹ-ಸೃಷ್ಟಿಯ ಅಗತ್ಯವನ್ನು ಒತ್ತಿಹೇಳಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದವರು ಸಂಪನ್ಮೂಲ ನಿರ್ಬಂಧಗಳು, ಅಪಾಯ ನಿವಾರಣೆ ಮತ್ತು ಸಾಂಸ್ಥಿಕ ಜಡತ್ವದಂತಹ ಅಡೆತಡೆಗಳನ್ನು ಗುರುತಿಸಿ ಚರ್ಚಿಸಿದರು.
ಕಾರ್ಯಾಗಾರದ ಭಾಗವಾಗಿ ಪ್ರತಿನಿಧಿಗಳು ಎನ್‌ಐಟಕೆ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿಗಳ ಪಾರ್ಕ್ ಮತ್ತು ಕೇಂದ್ರೀಯ ಸಂಶೋಧನಾ ಸೌಲಭ್ಯ ಮತ್ತು ಇನ್‌ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಮತ್ತು ಇ-ಸೆಲ್ ಆಯೋಜಿಸಿದ ಸ್ಟಾರ್ಟ್-ಅಪ್ ಎಕ್ಸ್‌ಪೋಗೆ ಭೇಟಿ ನೀಡಿದರು.







