ಗೇರು ತೋಪಿಗೆ ಬೆಂಕಿ: ನಂದಿಸಲು ಸಹಕರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ವ್ಯಕ್ತಿಯೋರ್ವರ ಗೇರು ಬೀಜದ ತೋಪಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಾನಿಯಾದ ಘಟನೆ ರವಿವಾರ ನಡೆದಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಕಡ್ಲಿಮಾರ್ ನಿವಾಸಿ ದಿವಾಕರ್ ರೈ ಎಂಬವರ ಗೇರುಬೀಜ ತೋಪಿಗೆ ಅಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ವುಂಟಾಗಿದೆ. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತನ್ನ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಅಗ್ನಿ ಶಾಮಕದಳದ ಸಿಬ್ಬಂದಿಗಳ ಜೊತೆಗೆ ಬೆಂಕಿ ಹಬ್ಬಿದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
Next Story





