ಮಂಗಳೂರು : ಕಟ್ಟಡದಿಂದ ಬಿದ್ದು ಪೈಂಟರ್ ಮೃತ್ಯು

ಮಂಗಳೂರು : ಪೈಂಟಿಂಗ್ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಶಕ್ತಿನಗರದಲ್ಲಿ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.
ಕುಡುಪು ಸಮೀಪದ ಕೊಂಚಾಡಿಯ ಮೋಹಿತ್ ಪೂಜಾರಿ (35) ಮೃತಪಟ್ಟ ಯುವಕ. ಇವರು ಮನೆಯೊಂದರ ಎರಡನೇ ಮಹಡಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಆ ವೇಳೆ ಏಣಿ ಜಾರಿ ಅವರು ಪಕ್ಕದ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





