ಉಪ್ಪಿನಂಗಡಿ: ಬೈಕ್ ಸ್ಕಿಡ್; ಹಿಂಬದಿ ಸವಾರ ಮೃತ್ಯು

ಉಪ್ಪಿನಂಗಡಿ: ಬೈಕೊಂದು ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ ಬೈಕ್‍ನ ಹಿಂಬದಿ ಸವಾರ ಮೃತಪಟ್ಟ ಘಟನೆ ಕರಾಯ ಗ್ರಾಮದ ಮರಿಪ್ಪಾದೆ ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲೋಲಿ ನಿವಾಸಿ ನಾರಾಯಣ ನಾಯ್ಕ (79) ಮೃತರು. ಇವರು ತನ್ನ ಪುತ್ರ ಉದಯ ಎಂಬವರು ಚಲಾಯಿಸುತ್ತಿದ್ದ ಬೈಕ್‍ನಲ್ಲಿ ಹಿಂಬದಿ ಸವಾರನಾಗಿ ಕಲ್ಲೇರಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ಅಲ್ಲಿಂದ ವಾಪಸ್ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಬೈಕ್ ಸವಾರ ಉದಯ ಅವರಿಗೂ ಗಂಭೀರ ಗಾಯವಾಗಿದ್ದು, ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





