ಶಿಥಿಲಗೊಂಡಿರುವ ತೊಡಿಕಾನದ ಅಡ್ಯಡ್ಕ ಸೇತುವೆ: ಘನವಾಹನ ಸಂಚಾರಕ್ಕೆ ನಿಷೇಧಿಸಿ ಗ್ರಾ.ಪಂ. ಸೂಚನಾ ಫಲಕ

ಸುಳ್ಯ : ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕ - ಚಾಂಬಾಡು ಸಂಪರ್ಕ ರಸ್ತೆಯ ಅಡ್ಡಡ್ಕದಲ್ಲಿರುವ ಸೇತುವೆಯು ಶಿಥಿಲಗೊಂಡಿದ್ದು, ಈ ಕಾರಣ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಅರಂತೋಡು ಗ್ರಾಮ ಪಂಚಾಯಿತಿ ಸೂಚನಾ ಫಲಕ ಅಳವಡಿಸಿದೆ.
ಈ ರಸ್ತೆಯಲ್ಲಿ ಇರುವ ಸೇತುವೆಯು ಶಿಥಿಲಗೊಂಡ ಬಗ್ಗೆ ಕಳೆದ ಎರಡು ವರ್ಷಗಳಿಂದಲೇ ದೂರುಗಳು ಬರುತ್ತಿದ್ದು ಈ ಕುರಿತು ತಾಂತ್ರಿಕ ಪರಿಶೀಲನೆಯನ್ನು ನಡೆಸಿದಾಗ ಸೇತುವೆ ಶಿಥಿಲಗೊಂಡಿರುವುದು ದೃಢಪಟ್ಟಿತ್ತು. ಶಿಥಿಲಗೊಂಡಿರುವುದು ದೃಢಪಟ್ಟಿದ್ದರೂ ನಿರಂತರವಾಗಿ ಘನ ವಾಹನಗಳು ಸಂಚರಿಸುತ್ತಿವೆ ಎಂದು ಸ್ಥಳೀಯರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು.
ಗ್ರಾಮ ಪಂಚಾಯಿತಿ ಸೇತುವೆಯ ಗುಣಮಟ್ಟದ ಬಗ್ಗೆ ತಾಂತ್ರಿಕ ಸಲಹೆ ಪಡೆದು ಘನ ಘನವಾಹನಗಳ ಸಂಚಾರ ನಿಷೇಧಿ ಸಲು ಕ್ರಮ ಕೈಗೊಂಡಿದೆ. ಆದುದರಿಂದ ಈ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಗ್ರಾ.ಪಂ. ಎಚ್ಚರಿಸಿದೆ. ಸಂಚಾರ ನಿಷೇಧzವಿಚಾರದಲ್ಲಿ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿಯ ವಿಷಯದಲ್ಲಿ ಅಡ್ಡಿಪಡಿಸುವ ಉದ್ದೇಶ ಇಲ್ಲ ಎಂದು ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ ತಿಳಿಸಿದ್ದಾರೆ.





