ಪಡೀಲ್: ಯುವಕ ಆತ್ಮಹತ್ಯೆ

ಮಂಗಳೂರು: ನಗರದ ಖಾಸಗಿ ಬಸ್ಸೊಂದರ ಮಾಲಕನ ಪುತ್ರ ಮಂಗಳವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರು ವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಪೊಲೀಸರು ತಿಳಿಸಿದ್ದಾರೆ.
ಪಡೀಲ್‌ನ ಭವಾನಿ ಬಸ್ ಮಾಲಕ ದೇವೇಂದ್ರರ ಪುತ್ರ ಪ್ರಜ್ವಲ್ ಡಿ.ಕೆ. (35) ಆತ್ಮಹತ್ಯೆ ಮಾಡಿಕೊಂಡವರು. ಇವರು ಪತ್ನಿ ಹಾಗೂ ನಾಲ್ಕು ವರ್ಷ ಪ್ರಾಯದ ಮಗುವನ್ನು ಅಗಲಿದ್ದಾರೆ.
ಪ್ರಜ್ವಲ್ ಮಂಗಳವಾರ ಬೆಳಗ್ಗೆ ಜೆ.ಎಂ. ರೋಡ್‌ನಲ್ಲಿರುವ ಸ್ವಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಲೋನ್ ಆ್ಯಪ್ ವ್ಯವಹಾರ ಹೊಂದಿದ್ದ ಪ್ರಜ್ವಲ್ ಸಕಾಲದಲ್ಲಿ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದೆ ಮಾನಸಿಕ ಕಿರುಕುಳಕ್ಕೊಳಗಾಗಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಮನೆಮಂದಿ ಶಂಕಿಸಿದ್ದಾರೆ.
Next Story





