ನೇಣು ಬಿಗಿದು ಯುವಕ ಆತ್ಮಹತ್ಯೆ

ಉಳ್ಳಾಲ: ಯುವಕನೋರ್ವ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಕುಂಪಲ ಸಮೀಪದ ಲಕ್ಷ್ಮಿ ಗುಡ್ಡೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮೂಲತ: ಕುಂಪಲ ಆಶ್ರಯ ಕಾಲನಿ ನಿವಾಸಿ ಧನರಾಜ್ ಪಿಳ್ಳೆ ಪೂಜಾರಿ (32) ಮೃತ ಯುವಕ.
ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್ ಕುಟುಂಬವು ಮನೆ ಪುನರ್ ನಿರ್ಮಾಣದ ಹಿನ್ನಲೆಯಲ್ಲಿ ಸಮೀಪದ ಲಕ್ಷ್ಮೀ ಗುಡ್ಡೆಯ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ಅವಿವಾಹಿತನಾಗಿರುವ ಧನರಾಜ್ ದೇರಳಕಟ್ಟೆಯಲ್ಲಿ ಆಟೋ ರಿಕ್ಷಾ ಚಲಾಯಿಸುತ್ತಿದ್ದ. ಇಂದು ಸಂಜೆ ಧನರಾಜ್ ತಾಯಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಧನರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.
Next Story





