ಹಿರಾ ಪ್ರೀ ಸ್ಕೂಲ್ ನ 'ಕಿಡ್ಸ್ ಗ್ರ್ಯಾಜುವೇಶನ್ ಡೇ' ಕಾರ್ಯಕ್ರಮ

ಉಳ್ಳಾಲ, ಮಾ.28: ಜಗತ್ತಿಗೆ ಬೆಳಕನ್ನು ನೀಡಿದ ಹಿರಾ ಗುಹೆಯ ಮಹಾ ದಾರ್ಶನಿಕನಂತೆ ಹಿರಾ ಶಾಲೆಯಿಂದ ಹೊರಡುವ ಪುಟಾಣಿಗಳು ಜಗತ್ತನ್ನು ಬೆಳಗಿಸುವಂತಾಗಲಿ ಎಂದು ಹಿರಾ ಶಿಕ್ಷಣ ಸಂಸ್ಥೆಗಳ ಮುಖ್ಯ ಮೌಲ್ಯ ಶಿಕ್ಷಣ ತಜ್ಞ ಮೌಲಾನ ಶುಐಬ್ ಹುಸೈನಿ ನದ್ವಿ ಹಾರೈಸಿದ್ದಾರೆ.
ಅವರು ಹಿರಾ ಪಿಯು ಕಾಲೇಜಿನ ಮುಹಮ್ಮದ್ ಸಿರಾಜುಲ್ ಹಸನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಗುರುವಾರ ನಡೆದ ಹಿರಾ ಪ್ರೀ ಸ್ಕೂಲ್ ನ 'ಕಿಡ್ಸ್ ಗ್ರ್ಯಾಜುವೇಶನ್ ಡೇ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಂತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಎಚ್.ಮೆಹಮೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಾ ಸ್ಕೂಲ್ ಎಚ್.ಓ.ಡಿ. ಮೌಲಾನ ಶುಐಬ್ ಹುಸೈನ್ ನದ್ವಿ, ಸಂಚಾಲಕ ರಹ್ಮತುಲ್ಲಾ, ಟ್ರಸ್ಟಿ ಅಬ್ದುಲ್ ಖಾದರ್, ಕಾರ್ಯದರ್ಶಿ ಅಬ್ದುಲ್ ಕರೀಂ, ಸಂಸ್ಥೆಯ ಎ.ಒ.ಝಾಕಿರ್ ಹುಸೈನ್, ಹಿರಾ ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷ ಶಾಫಿ ಬಬ್ಬುಕಟ್ಟೆ, ಸದಸ್ಯ ಅನ್ವರ್ ಹುಸೈನ್, ಪದವಿ ವಿಭಾಗದ ಪ್ರಾಂಶುಪಾಲೆ ಆಯಿಷಾ ಅಸ್ಮೀನ್, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಮಂಜುಳಾ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೀನಾ ವೇಗಸ್ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಶಿನೋರಿಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕನ್ಸಾ ವಂದಿಸಿದರು.







