ಬೆಳ್ತಂಗಡಿ: ರಸ್ತೆ ಅಪಘಾತ; ಹೇರಾಜೆ ಶೇಖರ ಬಂಗೇರ ಮೃತ್ಯು

ಹೇರಾಜೆ ಶೇಖರ ಬಂಗೇರ
ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿ ರಸ್ತೆ ಅಪಘಾತದಲ್ಲಿ ಹೇರಾಜೆ ಶೇಖರ ಬಂಗೇರ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಘಟನೆಯ ವಿವರ: ಶೇಖರ್ ಬಂಗೇರ ಅವರು ಇಂದು ರಾತ್ರಿ ಹೊಟೇಲ್ ನಿಂದ ಫುಡ್ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟುತ್ತಿದ್ದ ಸಂದರ್ಭ ದ್ವಿಚಕ್ರ ವಾಹನವೊಂದು ಢಿಕ್ಕಿಯಾಗಿದೆ.
ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಳೆಯಲ್ಪಟ್ಟ ಶೇಖರ ಬಂಗೇರ ಅವರು ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ದಾರಿ ಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನ ಸವಾರ ಕೂಡಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇಖರ ಬಂಗೇರ ಅವರು ನಿವೃತ್ತ ವಿಜಯಾ ಬ್ಯಾಂಕ್ ಮೆನೇಜರ್ ಆಗಿದ್ದು, ಲಾಯಿಲ ರಾಘವೇಂದ್ರ ಸ್ವಾಮಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿ, ಹಲವಾರು ಸಂಘ- ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Next Story





