ಫರಂಗಿಪೇಟೆ: ಬೀಡಿ ಡಿಪೋ ಗುತ್ತಿಗೆದಾರರ, ಕಾರ್ಮಿಕರ ಪ್ರತಿಭಟನೆ
![ಫರಂಗಿಪೇಟೆ: ಬೀಡಿ ಡಿಪೋ ಗುತ್ತಿಗೆದಾರರ, ಕಾರ್ಮಿಕರ ಪ್ರತಿಭಟನೆ ಫರಂಗಿಪೇಟೆ: ಬೀಡಿ ಡಿಪೋ ಗುತ್ತಿಗೆದಾರರ, ಕಾರ್ಮಿಕರ ಪ್ರತಿಭಟನೆ](https://www.varthabharati.in/h-upload/2024/04/03/1258194-3-beedi-depo.webp)
ಮಂಗಳೂರು : ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಫರಂಗಿಪೇಟೆ ಡಿಪೋ ಸುಮಾರು 60 ವರ್ಷಗಳಿಂದ ಬೀಡಿ ಉದ್ದಿಮೆ ಯನ್ನು ನಡೆಸುತ್ತಿದ್ದು 40 ಮಂದಿ ಬೀಡಿ ಗುತ್ತಿಗೆದಾರರು ಹಾಗೂ 3 ಸಾವಿರ ಬೀಡಿ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಡಿಪೋದಾರರು ಎ.1ರಿಂದ ಯಾವುದೇ ಸೂಚನೆ ಇಲ್ಲದೆ ಸಂಸ್ಥೆಯನ್ನು ಮುಚ್ಚಿರುತ್ತಾರೆ ಎಂದು ಆರೋಪಿಸಿ ಬುಧವಾರ ಡಿಪೋದ ಮುಂದೆ ಗುತ್ತಿಗೆದಾರರು ಮತ್ತು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಡಿಪೋ ಮುಚ್ಚಿದ ಕಾರಣ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಕೆಲಸವಿಲ್ಲವಾಗಿದೆ. ಈ ಬಗ್ಗೆ ದ.ಕ. ಜಿಲ್ಲಾ ಸಹಾಯ ಕಾರ್ಮಿಕ ಆಯುಕ್ತರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಯ ಮೂಲಕ ಮನವಿ ಮಾಡಿದರೂ ಕಂಪೆನಿಯ ಮಾಲಕರು ಹಠಮಾರಿ ಧೋರಣೆಯನ್ನು ಮುಂದುವರೆಸಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಸಿಐಟಿಯು ಮುಖಂಡ ಜೆ. ಬಾಬು ಕೃಷ್ಣ ಶೆಟ್ಟಿ, ಎಐಟಿಯುಸಿ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ, ಗುತ್ತಿಗೆದಾರರ ಪರವಾಗಿ ಶಿವಪ್ಪಸುವರ್ಣ, ಗೋಪಾಲ ಪೂಜಾರಿ, ಲಕ್ಷ್ಮಣ ಶೆಟ್ಟಿ, ಕೃಷ್ಣಪ್ಪಸಾಲ್ಯಾನ್ ಉಪಸ್ಥಿತರಿದ್ದರು.
Next Story