ಪ್ರಥಮ ಪಿಯು ತರಗತಿಯ ಉಚಿತ ಪ್ರವೇಶಕ್ಕೆ ಆಹ್ವಾನ
![ಪ್ರಥಮ ಪಿಯು ತರಗತಿಯ ಉಚಿತ ಪ್ರವೇಶಕ್ಕೆ ಆಹ್ವಾನ ಪ್ರಥಮ ಪಿಯು ತರಗತಿಯ ಉಚಿತ ಪ್ರವೇಶಕ್ಕೆ ಆಹ್ವಾನ](https://www.varthabharati.in/h-upload/2024/05/15/1266743-10.webp)
ಮಂಗಳೂರು, ಮೇ 15: ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ಎ.ಪಿ.ಜೆ ಅಬ್ದುಲ್ ಕಲಾಂ ಬಾಲಕಿಯರ ವಸತಿ ಕಾಲೇಜು (ಆಂಗ್ಲ ಮಾಧ್ಯಮ) ಶೈಕ್ಷಣಿಕ ವರ್ಷ 2024-25ನೇ ಸಾಲಿನಲ್ಲಿ ಪ್ರಥಮ ಪಿಯುಸಿ (ಪಿಸಿಎಂಬಿ/ಪಿಸಿಎಂಸಿ) ತರಗತಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಮೇ 15ರಿಂದ 27ರವರೆಗೆ ಕಚೇರಿ ದಿನಗಳಲ್ಲಿ ಸಂಜೆ 5:30 ಗಂಟೆಯೊಳಗೆ ಸಲ್ಲಿಸಬಹುದು. ಆಸಕ್ತ ಅಲ್ಪಸಂಖ್ಯಾತರ ಪೋಷಕರು/ವಿದ್ಯಾರ್ಥಿಗಳು ದಾಖಲೆಗಳ ಸಹಿತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಬಾಲಕಿಯರ ವಸತಿ ಕಾಲೇಜು, ಅಸೈಗೋಳಿ- ಕೊಣಾಜೆ, ಮಂಗಳೂರು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ: 7829892702 /7899541073ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story