ನೈರುತ್ಯ ಪದವೀಧರ ಕ್ಷೇತ್ರ : ಮುಹಮ್ಮದ್ ತುಂಬೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಮಂಗಳೂರು, ಮೇ,15: ನಿವೃತ್ತ ಪ್ರೌಢಶಾಲಾ ಶಿಕ್ಷಕ, ಸಾಮಾಜಿಕ ಕಾರ್ಯಕರ್ತ ಬಿ.ಮುಹಮ್ಮದ್ ತುಂಬೆ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ಮೈಸೂರಿನ ಉಪವಿಭಾಗಾಧಿಕಾರಿಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಕಳೆದ 40 ವರ್ಷಕ್ಕಿಂತ ಹೆಚ್ಚು ಕಾಲ ಸ್ಕೌಟಿಂಗ್ನಲ್ಲಿ ಸ್ಕೌಟ್ ಮಾಸ್ಟರ್ ಆಗಿ, ಜಿಲ್ಲಾ ಸಂಘಟನಾ ಆಯುಕ್ತರಾಗಿ, ಜಿಲ್ಲಾ ತರಬೇತಿ ಆಯುಕ್ತರಾಗಿ ಹಾಗೂ ಬಂಟ್ವಾಳ ಸ್ಥಳೀಯ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಸ್ಕೌಟ್ಸ್ ವಿಭಾಗದಲ್ಲಿ ಎಲ್ಟಿ ತರಬೇತಿ, ಕ್ಲಬ್ ವಿಭಾಗದಲ್ಲಿ ಎಚ್ ಡಬ್ಲ್ಯೂ ತರಬೇತಿಯನ್ನು ಪಡೆದು ಸ್ಥಳೀಯ,ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದಾರೆ.
Next Story