ಬಿ.ಸಿ.ರೋಡ್| ಸರಣಿ ಅಪಘಾತ: ಮೂರು ವಾಹನಗಳು ಜಖಂ
![ಬಿ.ಸಿ.ರೋಡ್| ಸರಣಿ ಅಪಘಾತ: ಮೂರು ವಾಹನಗಳು ಜಖಂ ಬಿ.ಸಿ.ರೋಡ್| ಸರಣಿ ಅಪಘಾತ: ಮೂರು ವಾಹನಗಳು ಜಖಂ](https://www.varthabharati.in/h-upload/2024/05/15/1266781-whatsapp-image-2024-05-15-at-90406-pm.webp)
ಬಂಟ್ವಾಳ : ಸರಣಿ ಅಪಘಾತ ಸಂಭವಿಸಿ ವಾಹನಗಳು ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯವಿಲ್ಲದೆ ಪಾರಾದ ಘಟನೆ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.
ಲಾರಿ, ಮಿನಿ ಬಸ್ ಹಾಗೂ ಕಾರು ಒಂದಕ್ಕೊಂದು ಢಿಕ್ಕಿಯಾಗಿ, ವಾಹನಗಳು ಜಖಂಗೊಂಡಿದೆ.
ಮಂಗಳೂರು ಕಡೆಯಿಂದ ಕಬ್ಬಿಣದ ವಸ್ತುಗಳನ್ನು ತರುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಮಿನಿಬಸ್ ಲಾರಿಗೆ ಢಿಕ್ಕಿಯಾಗಿದೆ, ಲಾರಿಯಲ್ಲಿ ವ್ಯಾಪ್ತಿ ಮೀರಿ ಹೊರಗಡೆಯಲ್ಲಿದ್ದ ಕಬ್ಬಿಣದ ಲೋಡ್ ಬಸ್ ನ ಗಾಜು ಒಡೆದಿದೆ, ಅದೃಷ್ಟವಶಾತ್ ಮಿನಿಬಸ್ ನಲ್ಲಿದ್ದ ಪ್ರಯಾಣಿಕರಿಗೆ ಇದರಿಂದ ಅಪಾಯವಾಗದೆ ಪಾರಾಗಿದ್ದಾರೆ.
ಇದೇ ಸಂದರ್ಭ ಬರುತ್ತಿದ್ದ ಕಾರೊಂದಕ್ಕೆ ಲಾರಿ ಢಿಕ್ಕಿಯಾಗಿದ್ದು, ಕಾರಿನ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ.
ಅಪಘಾತದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
Next Story