ಕರಾಟೆ ಚಾಂಪಿಯನ್ ಶಿಪ್: ಜೆಸ್ಸಿಕಾಗೆ ಚಿನ್ನದ ಪದಕ
![ಕರಾಟೆ ಚಾಂಪಿಯನ್ ಶಿಪ್: ಜೆಸ್ಸಿಕಾಗೆ ಚಿನ್ನದ ಪದಕ ಕರಾಟೆ ಚಾಂಪಿಯನ್ ಶಿಪ್: ಜೆಸ್ಸಿಕಾಗೆ ಚಿನ್ನದ ಪದಕ](https://www.varthabharati.in/h-upload/2024/05/15/1266801-jassica.webp)
ಮಂಗಳೂರು: ಕೇರಳದಲ್ಲಿ ಜೆಎಸ್ಕೆಎ ಅಂತರ್ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ಸ್ (Institute Of Karate And Martial Arts) ಪದವಿನಂಗಡಿ ಶಾಖೆಯ ಜೆಸ್ಸಿಕಾ ಇವರು ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾರೆ.
ಇವರು ಬೊಂದೆಲ್ನ ಜೈಸನ್ ಜೋಯ್ ಡಿ’ಸೋಜ ಹಾಗೂ ಕ್ರಿಸ್ಟಯಿಲ್ ಶೀಲಾ ಡಿ’ಸೋಜ ಅವರ ಪುತ್ರಿ, ಇವರು ಸಂಸ್ಥೆಯ ಮುಖ್ಯ ಶಿಕ್ಷಕ ನಿತಿನ್ ಎನ್ ಸುವರ್ಣ ಇವರ ಮಾರ್ಗದರ್ಶನದಲ್ಲಿ ಹಿರಿಯ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ತರಬೇತಿ ಪಡೆಯುತ್ತಿದ್ದು, ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿನಿ.
Next Story