ಉಳ್ಳಾಲ : ನೀರಿನ ಮಿತ ಬಳಕೆಗೆ ನಗರಸಭೆ ಸೂಚನೆ
![ಉಳ್ಳಾಲ : ನೀರಿನ ಮಿತ ಬಳಕೆಗೆ ನಗರಸಭೆ ಸೂಚನೆ ಉಳ್ಳಾಲ : ನೀರಿನ ಮಿತ ಬಳಕೆಗೆ ನಗರಸಭೆ ಸೂಚನೆ](https://www.varthabharati.in/h-upload/2024/05/15/1266806-minnn1563737133.webp)
ಉಳ್ಳಾಲ : ನಗರಸಭಾ ವ್ಯಾಪ್ತಿಯಲ್ಲಿನ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಬೇಸಿಗೆಯಿಂದಾಗಿ ದಿನೇ ದಿನೇ ಕಡಿಮೆಯಾಗುತ್ತಿದೆ ಮತ್ತು ಮನಪಾದಿಂದ ಸರಬರಾಜು ಆಗುವ ನೀರಿನಲ್ಲಿಯೂ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಅಗತ್ಯ ಉದ್ದೇಶಕ್ಕೆ ಮಾತ್ರ ನೀರನ್ನು ಬಳಕೆ ಮಾಡಲು ಸೂಚಿಸಿದೆ.
ನೀರನ್ನು ಅನಾವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಿ ನಳ್ಳಿಯ ಸಂಪರ್ಕವನ್ನು ಕಡಿತಗೊಳಿಸಲು ಕ್ರಮವಹಿಸಲಾಗುವುದು. ನಳ್ಳಿ ನೀರಿನ ಶುಲ್ಕ ಪಾವತಿಸಲು ಬಾಕಿ ಇರುವವರು ಕೂಡಲೇ ಪಾವತಿಸಿ ಸಹಕರಿಸುವಂತೆ ಉಳ್ಳಾಲ ನಗರ ಸಭಾ ಪೌರಾಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Next Story