ದೇರಳಕಟ್ಟೆ: ವಿಶ್ವ ತುರ್ತು ಔಷಧ ದಿನಾಚರಣೆ ಕಾರ್ಯಕ್ರಮ

ದೇರಳಕಟ್ಟೆ: ರೋಗಿಗೆ ತುರ್ತು ಔಷಧಿ ಯಾವ ಸಂದರ್ಭದಲ್ಲಿ ನೀಡಬಹುದು ಎಂಬ ಮಾಹಿತಿ ವೈದ್ಯರಿಗೆ ಅಗತ್ಯ ಇರಬೇಕು. ಚಿಕಿತ್ಸೆಗಿಂತ ಜಾಸ್ತಿಯಾಗಿ ಯಾವ ಔಷಧಿ ರೋಗಿಗೆ ಪರಿಣಾಮಕಾರಿಯಾಗಬಹುದು ಎಂಬ ಅರಿವು ಇರಬೇಕಾಗುತ್ತದೆ. ಪಿಜಿ ಹೇಳಿದ ಔಷಧಿ ತುರ್ತು ತಲುಪಿಸುವುದು ಹೇಗೆ, ರೋಗಿಯನ್ನು ಬದುಕಿಸಲು ಮುಂದಿನ ಹೆಜ್ಜೆ ಏನು ಎಂಬುದು ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ ಎಂದು ಕಣಚೂರು ಮೆಡಿಕಲ್ ಕಾಲೇಜು ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳಿದರು.
ಅವರು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಾಟೆಕಲ್ ಇದರ ಆಶ್ರಯದಲ್ಲಿ ವಿಶ್ವ ತುರ್ತು ಔಷಧ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಇಸ್ಮಾಯಿಲ್ ಹೆಜಮಾಡಿ ಮಾತನಾಡಿ, ಯುರೋಪಿಯನ್ ಮೆಡಿಕಲ್ ಕಾಲೇಜು ತುರ್ತು ಔಷಧಿ ದಿನಾಚರಣೆ ಮೊದಲ ಬಾರಿಗೆ ನಡೆಸಿತು. ಈ ಮೂಲಕ ಕೆಲವು ಅಧ್ಯಯನಗಳನ್ನು ಕೂಡ ನಡೆಸಿದೆ. ಇದರ ಬಳಿಕ ಬ್ರಿಟನ್, ಸ್ಪೇನ್, ನೆದರ್ ಲ್ಯಾಂಡ್ ನಲ್ಲೂ ಆಚರಣೆ ಮಾಡಲಾರಂಭಿಸಿದರು. ಈಗ ಭಾರತದಲ್ಲೂ ಆಚರಣೆ ಮಾಡಿ ಇದರ ಮಹತ್ವ ತಿಳಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ಪ್ರೊ ಡಾ. ರತ್ನಾಕರ ಯು ಪಿ, ಪ್ರೊ ಡಾ.ಎಂ.ವಿ.ಪ್ರಭು, ವೈದ್ಯಕೀಯ ಕಾಲೇಜು ಸಹ ಡೀನ್ ಡಾ. ಶಹನವಾಝ್ ಮಣಿಪ್ಪಾಡಿ ,ಡಾ.ವಿಜಯ್ ಕುಮಾರ್ ಎಸ್.ಎಸ್ ಉಪಸ್ಥಿತರಿದ್ದರು.







