ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮನೆಗೆ ಐವನ್ ಡಿಸೋಜ ಭೇಟಿ
![ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮನೆಗೆ ಐವನ್ ಡಿಸೋಜ ಭೇಟಿ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮನೆಗೆ ಐವನ್ ಡಿಸೋಜ ಭೇಟಿ](https://www.varthabharati.in/h-upload/2024/06/11/1271461-11-masood-ivon.webp)
ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ, ಮಾಜಿ ಮುಖ್ಯ ಸಚೇತಕ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಗೂ ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರ ನಿವಾಸಕ್ಕೆ ವಿಧಾನ ಪರಿಷತ್ ನೂತನ ಶಾಸಕ ಐವನ್ ಡಿಸೋಜ ಭೇಟಿ ನೀಡಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಹಾಜಿ ಸಿ. ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಕೆ. ಅಶ್ರಫ್, ಪ್ರಧಾನ ಕಾರ್ಯ ದರ್ಶಿ ಮುಹಮ್ಮದ್ ಹನೀಫ್, ಪದಾಧಿಕಾರಿಗಳಾದ ಹಾಜಿ ಬಿ. ಅಬೂಬಕರ್, ಡಾ. ಮುಹಮ್ಮದ್ ಆರೀಫ್ ಮಸೂದ್, ಹಾಜಿ ರಿಯಾಝುದ್ದೀನ್, ಸಿ.ಎಂ. ಹನೀಫ್, ಹಾಜಿ ಮೊಯಿದಿನ್ ಮೋನು, ಅಬ್ಬಾಸ್ ಉಚ್ಚಿಲ್, ಎಂ.ಎ. ಅಶ್ರಫ್, ಬಿ.ಎಸ್. ಇಮ್ತಿಯಾಝ್, ಎಂ. ಅನ್ವರ್ ರೀಕೊ ಉಪಸ್ಥಿತರಿದ್ದರು.
Next Story