ಮೇಲ್ತೆನೆಯಿಂದ ʼತರವಾಡ್‌ಲ್ ಒರು ನಾಲ್ʼ ಕಾರ್ಯಕ್ರಮ

ಮಂಗಳೂರು: ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ಮೇಲ್ತೆನೆ ಸಂಘಟನೆಯ ವತಿಯಿಂದ ʼತರವಾಡ್‌ಲ್ ಒರು ನಾಲ್ʼ ಕಾರ್ಯಕ್ರಮವು ರವಿವಾರ ಕಿನ್ಯ ಗ್ರಾಮದ ಕುರಿಯಕ್ಕಾರ್ ತರವಾಡ್ ಕುಟುಂಬಸ್ಥರ ಮನೆಯಲ್ಲಿ ನಡೆಯಿತು.
ಕುರಿಯಕ್ಕಾರ್ ಕುಟುಂಬದ ಸದಸ್ಯ ಹಾಗೂ ಕಿನ್ಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಕೆ.ಸಿ. ಇಸ್ಮಾಯಿಲ್ ಹಾಜಿ ಮಾತನಾಡಿ, ತರವಾಡ್ ಮನೆಗಳು ಬ್ಯಾರಿ ಜನಾಂಗದ ಅಸ್ಮಿತೆಯಾಗಿದೆ. ಈ ತರವಾಡ್ ಕುಟುಂಬ ಮತ್ತು ಮನೆಗಳಿಗೆ ತನ್ನದೇ ಆದ ಇತಿಹಾಸ ಹಾಗೂ ಗೌರವವೂ ಇದೆ. ಇವುಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಹೇಳು ಮೇಲ್ತೆನೆಯ ಪ್ರಯತ್ನವು ಶ್ಲಾಘನೀಯ ಎಂದರು.
ಕುರಿಯಕ್ಕಾರ್ ಕುಟುಂಬದ ಹಿರಿಯರಾದ ಅಬೂಸಾಲಿಹ್ ಹಾಜಿ ಕಿನ್ಯ ಸ್ವಾಗತಿಸಿ ಕುಟುಂಬದ ಪರಂಪರೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಟುಂಬದ ಸದಸ್ಯರಾದ ಮುಹಮ್ಮದ್ ಕುರಿಯ, ಎನ್.ಕೆ. ಮುಹಮ್ಮದ್, ಮುಹಮ್ಮದ್ ಮತ್ತಿತರರು ಕುರಿಯಕ್ಕಾರ್ ಕುಟುಂಬದ ಬಗ್ಗೆ ವಿವರಿಸಿದರು. ಮಾಜಿ ಅಧ್ಯಕ್ಷರಾದ ಮುಹಮ್ಮದ್ ಬಾಷಾ ನಾಟೆಕಲ್, ಮನ್ಸೂರ್ ಅಹ್ಮದ್ ಸಾಮಣಿಗೆ, ಹಂಝ ಮಲಾರ್, ಸದಸ್ಯ ಆಸೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಬಶೀರ್ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಇಬ್ರಾಹಿಮ್ ಹಾಜಿ ನಡುಪದವು ವಂದಿಸಿದರು.







