ಮಂಗಳೂರು: ಟ್ಯಾಲೆಂಟ್ ಎಕ್ಸಲೆನ್ಸ್ ಅವಾರ್ಡ್‌ಗೆ ಅರ್ಜಿ ಆಹ್ವಾನ

ಮಂಗಳೂರು, ಜೂ.26: ಪ್ರತೀ ವರ್ಷದಂತೆ ಈ ಬಾರಿಯೂ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಗುವುದು.
ಪ್ರಶಸ್ತಿಯ ವಿವರ: ಸರಕಾರಿ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಟಾಪ್ -3, ಖಾಸಗಿ /ಅನುದಾನಿತ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಟಾಪ್ -7, ಪಿಯುಸಿ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ -ವಿಜ್ಞಾನ ಟಾಪ್-2, ಕಲಾ- ಟಾಪ್-2, ವಾಣಿಜ್ಯ- ಟಾಪ್-2, ಪಿಯುಸಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿಜ್ಞಾನ ಟಾಪ್-3, ಕಲಾ- ಟಾಪ್-3, ವಾಣಿಜ್ಯ- ಟಾಪ್-3, ಸಿಇಟಿ ಟಾಪ್-2 ಮತ್ತು ನೀಟ್‌ನಲ್ಲಿ ಟಾಪ್- 2 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುವುದು.
ಪ್ರಶಸ್ತಿಯನ್ನು ದ.ಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುವುದು.
ಎಸೆಸೆಲ್ಸಿ ಮತ್ತು ಪಿಯುಸಿ ಶಾಲೆ / ಕಾಲೇಜು ದೃಢೀಕೃತ ಅಂಕಪಟ್ಟಿ, ಹಾಲ್ಟಿಕೇಟ್ ನಂಬರ್, ಜನ್ಮ ದಿನಾಂಕ ಹಾಗೂ ಫೋಟೋ ಲಗತ್ತಿಸುವುದು ಕಡ್ಡಾಯವಾಗಿದೆ.
ಎಸೆಸೆಲ್ಸಿಯಲ್ಲಿ ಶೇ 95ಕ್ಕಿಂತ ಜಾಸ್ತಿ ಮತ್ತು ಪಿಯುಸಿಯಲ್ಲಿ ಶೇ 95 ಕ್ಕಿಂತ ಜಾಸ್ತಿ ಅಂಕ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 5, 2024 . ಅರ್ಜಿಯನ್ನು ವಿದ್ಯಾರ್ಥಿ ವೈಯಕ್ತಿಕವಾಗಿ ಅಥವಾ ಇತರರು ಖುದ್ದಾಗಿ, ಅಂಚೆ ಮೂಲಕ ಅಥವಾ ಈ ಮೇಲ್ ಮೂಲಕ ಸಲ್ಲಿಸಬಹುದು.
ಬಂದ ಅರ್ಜಿಗಳಲ್ಲಿ ಟಾಪ್ 5 ಅತ್ಯಧಿಕ ಅಂಕ ಪಡೆದವರನ್ನು ಪ್ರಶಸ್ತಿಗೆ ಪರಿಗಣಿಲಾಗುವುದು. ಪ್ರಶಸ್ತಿಗೆ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಕಳುಹಿಸಿಕೊಡುವಂತೆ ಪ್ರಕಟನೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ವಿಶ್ವಾಸ್ ಕ್ರೌನ್, ಕೊಚ್ಚಿನ್ ಬೇಕರಿ ಹತ್ತಿರ, ಕಂಕನಾಡಿ, ಮಂಗಳೂರು-2, ಇ ಮೇಲ್ ಐಡಿ: trfmanglore2@gmail.com, ದೂರವಾಣಿ :0824-4267883, 9972283365, 9844773906







