Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಮನಪಾ ಸಭೆಯಲ್ಲಿ ಸದ್ದು ಮಾಡಿದ...

ಮಂಗಳೂರು: ಮನಪಾ ಸಭೆಯಲ್ಲಿ ಸದ್ದು ಮಾಡಿದ ಮೆಸ್ಕಾಂ ನಿರ್ಲಕ್ಷ್ಯ

ಅನಧಿಕೃತ ಕೇಬಲ್ ತೆರವು: ಮೇಯರ್

ವಾರ್ತಾಭಾರತಿವಾರ್ತಾಭಾರತಿ29 Jun 2024 5:58 PM IST
share
ಮಂಗಳೂರು: ಮನಪಾ ಸಭೆಯಲ್ಲಿ ಸದ್ದು ಮಾಡಿದ ಮೆಸ್ಕಾಂ ನಿರ್ಲಕ್ಷ್ಯ

ಮಂಗಳೂರು: ಮಳೆಯ ವೇಳೆ ಅಲ್ಲಲ್ಲಿ ತಡೆಗೋಡೆಗಳ ಕುಸಿತದಿಂದ ಪ್ರಾಣ ಹಾನಿ, ವಿದ್ಯುತ್ ತಂತಿ ಹರಿದು ಅಮಾಯ ಕರ ಬಲಿ, ಜಲಸಿರಿ ಹಾಗೂ ಒಳಚರಂಡಿ ಯೋಜನೆಗಾಗಿ ಅಲ್ಲಲ್ಲಿ ಅಗೆತದಿಂದ ನಗರದಲ್ಲಿ ಮಳೆಯ ಸಂದರ್ಭ ಉಂಟಾಗು ತ್ತಿರುವ ಸಮಸ್ಯೆಗಳ ಬಗ್ಗೆ ಶನಿವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತ ವಾಗಿ ಮನಪಾ ಸದಸ್ಯರಿಂದ ತೀವ್ರ ಚರ್ಚೆಗೆ ಕಾರಣವಾಯಿತು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಾಕೃತಿಕ ವಿಕೋಪದಿಂದಾಗಿ ನಗರದಲ್ಲಿ ಸಂಭವಿಸಿದ ಘಟನೆಗಳನ್ನು ಪ್ರಸ್ತಾವಿಸಿದರು.

ಪಾಂಡೇಶ್ವರದ ರೊಸಾರಿಯೋ ಬಳಿ ರಿಕ್ಷಾ ಚಾಲಕರಿಬ್ಬರು ಮೆಸ್ಕಾಂನ ನಿರ್ಲಕ್ಷಯ ಹಾಗೂ ಅನಧಿಕೃತ ಕೇಬಲ್‌ ಗಳಿಂದಾಗಿ ಸಾವನ್ನಪ್ಪಿದ್ದಾರೆ. ಕೊಟ್ಟಾರದಲ್ಲಿ ನೀರು ಹರಿಯುವ ತೋಡಿಗೆ ತಡೆಗೋಡೆ ಇಲ್ಲದೆ ರಿಕ್ಷಾ ಚಾಲಕರೊಬ್ಬರು ಬಿದ್ದು ಮೃತಪಟ್ಟಿದ್ದಾರೆ. ಕಾಲುವೆಗಳಿಗೆ ತಡೆಗೋಡೆ ನಿರ್ಮಿಸಬೇಕೆಂದು ಈ ಹಿಂದೆ ಹಲವು ಬಾರಿ ಒತ್ತಾಯ ಮಾಡಿದ್ದರೂ ಆಗಿಲ್ಲ. ಮಳೆಯ ಸಂದರ್ಭ ಮನೆಗಳಿಗೆ ಹಾನಿಯಾದಾಗ ಮಾತ್ರವೇ ಪರಿಹಾರ ಸಿಗುತ್ತದೆ. ತಡೆಗೋಡೆಗೆ ಹಾನಿಯಾದರೆ ಇಲ್ಲ. ನಗರದ 60 ವಾರ್ಡ್‌ಗಳಲ್ಲಿ ಸುಮಾರು 600 ತಡೆಗೋಡೆಗಳ ಕುಸಿತ ಆಗಿರಬಹುದು. ನೇತ್ರಾವತಿ ಜಲಾಭಿಮುಖ ಯೋಜನೆಯ ತಡೆಗೋಡೆ ಕುಸಿತ ಆಗಿದೆ ಎಂದು ಸಮಸ್ಯೆಗಳ ಸರಮಾಲೆಯನ್ನೇ ಸಭೆಯ ಮುಂದಿಟ್ಟರು.

ಸದಸ್ಯರಾದ ಮಹಮ್ಮದ್ ಲತೀಫ್, ಅಬ್ದುಲ್ ರವೂಫ್, ದಿವಾಕರ ಪಾಂಡೇಶ್ವರ, ಗಾಯತ್ರಿ, ಭಾಸ್ಕರ್, ಪ್ರೇಮಾನಂದ ಶೆಟ್ಟಿ, ವಿನಯರಾಜ್, ಶಶಿಧರ ಹೆಗ್ಡೆ ಮೊದಲಾದವರು ಪ್ರಸ್ತಾಪಿಸಿ, ವಿದ್ಯುತ್ ಕಂಬಗಳಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿ ರುವ ಎಲ್ಲ ಕೇಬಲ್‌ಗಳನ್ನು ತೆರವುಗೊಳಿಸಿ ಭೂಗತ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮೆಸ್ಕಾಂ ಅಧಿಕಾರಿ, ಕಳೆದ ಎರಡು ವರ್ಷದಿಂದ ಹೊಸದಾಗಿ ಕೇಬಲ್ ಅಳವಡಿಕೆಗೆ ಯಾರಿಗೂ ಅನುಮತಿ ನೀಡಿಲ್ಲ. ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ನೀಡಿದರೆ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ನೋಟಿಸ್ ನೀಡಿಯೇ ವಿದ್ಯುತ್ ಕಂಬಗಳಿಂದ ಕೇಬಲ್ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈ ಬಗ್ಗೆ ತೀವ್ರ ಚರ್ಚೆಯ ಬಳಿಕ ಮೇಯರ್ ಸುಧೀರ್ ಶೆಟ್ಟಿಯವರು, ಸ್ಮಾರ್ಟ್ ಸಿಟಿ ವತಿಯಿಂದ ಜಂಟಿ ಸರ್ವೆ ನಡೆಸುವ ವೇಳೆ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ನಗರದ ಎತ್ತರ ಹಾಗೂ ಗದ್ದೆ ಪ್ರದೇಶಗಳಲ್ಲಿ ಖಾಲಿ ಜಾಗಗಳನ್ನು ಮಣ್ಣು ತುಂಬಿಸಿ ಲೇಔಟ್ ಮಾಡುವ ಸಂದರ್ಭ ನೀರಿನ ಹರಿವಿಗೆ ಸ್ಥಳಾವಕಾಶ ಇಲ್ಲದೆ ಅನೇಕ ಕಡೆ ತೊಂದರೆಯಾಗುತ್ತಿರುವ ಬಗ್ಗೆ ಸದಸ್ಯರನೇಕರು ಮೇಯರ್ ಗಮನ ಸೆಳೆದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಈ ಬಗ್ಗೆ ಗಮನ ಹರಿಸುತ್ತಿಲ್ಲ. ಏಕ ನಿವೇಶನಗಳಿಗೆ ಅನುಮೋದನೆ ನೀಡುವಾಗ ಪಾಲಿಕೆಯ ನಿರಕ್ಷೇಪಣಾ ಪತ್ರ ಕಡ್ಡಾಯವಾಗಿದೆ. ಆಗಲೇ ನಿವೇಶನದ ಖಾಲಿ ಜಾಗವನ್ನು ತುಂಬಿಸುವಲ್ಲಿ ಅನುಸರಿಸಬೇಕಾದ ಕಟ್ಟುನಿಟ್ಟಿನ ವಿಧಾನಗಳ ಬಗ್ಗೆ ನಿಗಾ ವಹಿಸಬೇಕು. ಸ್ಥಳ ಪರಿಶೀಲನೆ ವೇಳೆಯೂ ಮೂಡಾ ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಡಾ. ಭರತ್ ಶೆಟ್ಟಿ ಪ್ರತಿಕ್ರಿಯಿಸಿ, ಏಕ ನಿವೇಶನ ಕೊಡುವ ಸಂದರ್ಭ ಮಳೆ ನೀರು ಪ್ರಾಕೃತಿಕವಾಗಿ ಹರಿಯುವ ಬಗ್ಗೆ ಮುಡಾ ಹಾಗೂ ಮನಪಾ ಜಂಟಿಯಾಗಿ ಗಮನ ಹರಿಸಿಯೇ ಪರವಾನಿಗೆ ನೀಡಬೇಕು. ಮನಪಾ ಮತ್ತು ಮುಡಾ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದೆ ಈ ಸಮಸ್ಯೆಯಾಗುತ್ತಿದ್ದು, ಜನಪ್ರತಿನಿಧಿಗಳೂ ಈ ವಿಷಯದಲ್ಲಿ ವಿಫಲವಾಗುವಂತೆ ಆಗಿದೆ ಎಂದರು.

ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಚರಂಡಿ ವ್ಯವಸ್ಥೆಯ ಬಗ್ಗೆ ಗಮನಿಸಿಯೇ ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ನೀಡಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಸಿರಿ ಯೋಜನೆ ಬಗ್ಗೆ ಪ್ರತ್ಯೇಕ ಸಭೆ

ನಗರಕ್ಕೆ 24x7 ನೀರು ಪೂರೈಕೆಯ 729 ಕೋಟಿ ರೂ.ಗಳ ಜಲಸಿರಿ ಯೋಜನೆ ಆರಂಭಗೊಂಡು ಐದು ವರ್ಷಗಳಾದರೂ ಅರ್ಧದಷ್ಟು ಕಾಮಗಾರಿ ಆಗಿಲ್ಲ. ಗುತ್ತಿಗೆ ಅವಧಿ ಪ್ರಕಾರ ಜುಲೈನಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದೆ. ಆದರೆ ಎರಡು ವಲಯಗಳ ಪೈಲೆಟ್ ಯೋಜನೆಯೇ ಕಾರ್ಯಗತಗೊಂಡಿಲ್ಲ. ಈ ಕಾಮಗಾರಿಯಿಂದಾಗಿ ಈ ಹಿಂದೆ ಇದ್ದ ನೀರಿನ ಪೂರೈಕೆ ಜಾಲವೂ ಹಾಳಾಗಿದೆ. ಈ ಬಗ್ಗೆ ಸದನದಲ್ಲಿ ಅಧಿಕಾರಿಗಳು ಉತ್ತರಿಸಬೇಕೆಂದು ಸದಸ್ಯ ವಿನಯರಾಜ್ ಸಭೆಯಲ್ಲಿ ಪಟ್ಟು ಹಿಡಿದರು.

ಈ ಬಗ್ಗೆ ಯೋಜನೆಯ ಹಿರಿಯ ಅಧಿಕಾರಿ ಮಾಹಿತಿಯಿಂದ ತೃಪ್ತಗೊಳ್ಳದ ಸದಸ್ಯರು ಪ್ರತ್ಯೇಕ ಸಭೆಗೆ ಆಗ್ರಹಿಸಿದಾಗ, ಜಲಸಿರಿ ಯೋಜನೆಯ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ಮೇಯರ್ ನಿರ್ಣಯಿಸಿದರು.

ಸಭೆಯಲ್ಲಿ ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ, ಪಾಲಿಕೆ ಆಯುಕ್ತ ಆನಂದ್ ಉಪಸ್ಥಿತರಿದ್ದರು.

ಆಡಳಿತ- ವಿಪಕ್ಷ ಸದಸ್ಯರಿಂದ ಗದ್ದಲಕ್ಕೆ ಕಾರವಾದ ಆಸ್ತಿ ತೆರಿಗೆ ವಿವಾದ

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳದ ಕುರಿತಂತೆ ಸಭೆಯಲ್ಲಿ ಪ್ರಸ್ತಾವಿಸಿದ ಶಾಸಕ ಡಾ. ಭರತ್ ಶೆಟ್ಟಿ, 2023ರಲ್ಲಿ ಆಸ್ತಿ ತೆರಿಗೆ ಹೆಚ್ಚಳವಾದಾಗ ಆಗ ಅದನ್ನು ಪರಿಷ್ಕರಿಸಿ ಕ್ರಮ ವಹಿಸಲಾಗಿತ್ತು. ಇದೀಗ ಮತ್ತೆ ಹೆಚ್ಚಳ ಮಾಡಲಾಗಿದೆ. 2021ರಲ್ಲಿ ಮಾರ್ಗದರ್ಶಿ ದರ (ಗೈಡೆನ್ಸ್ ವ್ಯಾಲ್ಯೂ)ದಲ್ಲಿ ಹೆಚ್ಚಳಕ್ಕೆ ಕೇಂದ್ರದಿಂದ ಸೂಚನೆ ಬಂದಿದ್ದರೂ, ಅದನ್ನು ವಿವಿಧ ಹಂತಗಳಲ್ಲಿ ದರ ನಿಗದಿಪಡಿಸಿ ಪರಿಷ್ಕರಣೆ ಮಾಡುವ ಅಧಿಕಾರ ಮನಪಾಕ್ಕೆ ಇದೆ ಎಂದರು.

2023ರಲ್ಲಿ ಮನಪಾ ಆಡಳಿತ ಜನರಿಗೆ ಹೊರೆ ಆಗದಂತೆ ಪರಿಷ್ಕರಿಸಿತ್ತು ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿದರು. 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಎಲ್ಲಾ ನಗರ ಪಾಲಿಕೆಗಳ ತೆರಿಗೆ ಪರಿಷ್ಕರಣೆ ಗೈಡೆನ್ಸ್ ವ್ಯಾಲ್ಯೂನಂತೆ ನಡೆಸುವಂತೆ ಆದೇಶ ಹೊರಡಿಸಿತ್ತು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಅನುಮೋದನೆ ನೀಡಿದ್ದರು. ಆ ಸಂದರ್ಭದಲ್ಲಿಯೇ ವಿಪಕ್ಷ ಸದಸ್ಯರು ವಿರೋಧಿಸಿದ್ದರು ಎಂದು ಹೇಳಿದಾಗ ಸಭೆಯಲ್ಲಿ ಕೆಲಹೊತ್ತು ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಹಿಂದೆ ಆದೇಶ ಆಗಿರುವುದನ್ನು ಒಪ್ಪುತ್ತೇವೆ. ಆದರೆ ಬಳಿಕ ಅದನ್ನು ಹೊರೆಯಾಗದಂತೆ ಕ್ರಮ ವಹಿಸಲಾಗಿತ್ತು. ಈಗ ಕೂಡಾ ಅದೇ ರೀತಿಯಲ್ಲಿ ಮಾಡಬೇಕಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಸಲಹೆ ನೀಡಿದರು.

ಮೇಯರ್ ಸುಧೀರ್ ಶೆಟ್ಟಿ ಪ್ರತಿಕ್ರಿಯಿಸಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಹೊಸ ತೆರಿಗೆ ಪರಿಷ್ಕರಣೆ ಬಗ್ಗೆ ಕಾರ್ಯಸೂಚಿ ಮಂಡಿಸಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಸರಕಾರಕ್ಕೆ ಪಾಲಿಕೆ ನಿಯೋಗತೆರಳಿ ನಗರಾಭಿವೃದ್ಧಿ ಸಚಿವರ ಜತೆ ಚರ್ಚೆ ಮಾಡಿ ಹೊರೆ ಆಗದ ರೀತಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ಮನಪಾ ಸದಸ್ಯರಿಗೆ ತಲಾ 1 ಕೋಟಿ ರೂ. ಅನುದಾನ

ಸಭೆಯ ಆರಂಭದಲ್ಲಿಯೇ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ಮನಪಾ ಸದಸ್ಯರ ಅನುದಾನವನ್ನು 1 ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕೆಂಬ ಬೇಡಿಕೆ ಮಂಡಿಸಿದರು. ಈ ಬಗ್ಗೆ ಮನಪಾ ಸದಸ್ಯರ ಒತ್ತಾಯದ ಬಳಿಕ ಮನಪಾ ಸದಸ್ಯರಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಲಾಗುವ ಅನುದಾನವನ್ನು 75 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಏರಿಕೆ ಮಾಡಿ ಮೇಯರ್ ಸುಧೀರ್ ಶೆಟ್ಟಿ ಘೋಷಿಸಿದರು.

ಮಾತ್ರವಲ್ಲದೆ ಆರಂಭಿಕವಾಗಿ 50 ಲಕ್ಷ ರೂ.ಗಳ ಕಾಮಗಾರಿಯ ಅಂದಾಜು ಪಟ್ಟಿ ನೀಡುವಂತೆ ಸೂಚಿಸಿದಾಗ ಸದಸ್ಯ ರಿಂದ ಮತ್ತೆ ಆಕ್ಷೇಪ ವ್ಯಕ್ತವಾಗಿ ಕೊಡುವುದಾದರೆ ಪೂರ್ಣ 1 ಕೋಟಿ ರೂ.ಗಳಿಗೆ ಅನುದಾನ ನೀಡಿ, ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಿ ಎಂದು ಪಟ್ಟುಹಿಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X